ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ ಪಡೆದಿದ್ದಾನೆ. ಈ ಹಣದಲ್ಲಿ ಐಷಾರಾಮಿ ಜೀವನ ಶುರು ಮಾಡಿದ್ದಾನೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಅಮೆರಿಕದ ಫ್ಲೋರಿಡಾದಲ್ಲಿ ವಾಸಿಸುವ ಡೇವಿಡ್ ಹೈನ್ಸ್ ಮೇಲೆ ಬ್ಯಾಂಕ್ ವಂಚನೆ ಆರೋಪವಿದೆ. ಕೊರೊನಾ ಪರಿಹಾರ ಕಾರ್ಯಕ್ರಮದಡಿ ಹಣ ಪಡೆದ ವ್ಯಕ್ತಿ ಲಂಬೋರ್ಘಿನಿ ಕಾರು ಖರೀದಿಸಿದ್ದಾನೆ. ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಸ್ತುಗಳನ್ನು ಖರೀದಿಸಿ ದುಬಾರಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾನೆ.
ಯುವಕ ವಿವಿಧ ಕಂಪನಿಗಳ ಉದ್ಯೋಗಿಗಳಿಗೆ ಸಂಬಳ ನೀಡುವ ಹೆಸರಿನಲ್ಲಿ ಸರ್ಕಾರದಿಂದ 135 ಮಿಲಿಯನ್ ಡಾಲರ್ ಪಡೆಯಲು ಪ್ರಯತ್ನಿಸಿದ. ಆದರೆ ತನಿಖೆಯ ಸಮಯದಲ್ಲಿ ಅನೇಕ ಉದ್ಯೋಗಿಗಳು ನಕಲಿ ಎಂಬುದು ಗೊತ್ತಾಗಿತ್ತು. ಅಷ್ಟರಲ್ಲೇ ಬ್ಯಾಂಕ್ 93.9 ಮಿಲಿಯನ್ ಸಾಲವನ್ನು ಅನುಮೋದಿಸಿತ್ತು. ಸ್ಫೋರ್ಟ್ಸ್ ಕಾರು ಅಪಘಾತಕ್ಕೀಡಾಗಿ ಅದ್ರ ತನಿಖೆ ನಡೆಯುವ ವೇಳೆ ಈ ಸತ್ಯ ಹೊರಬಿದ್ದಿದೆ.