ಕೊರೊನಾ ಮಹಾಮಾರಿಗೆ ಲಸಿಕೆ ಯಾವಾಗ ಸಿಗುತ್ತದೆಯೋ ಎಂಬಂತಾಗಿದೆ. ಈಗಾಗಲೇ ಅನೇಕ ದೇಶಗಳು ಕೊರೊನಾ ಮಹಾಮಾರಿಗೆ ಔಷಧವನ್ನು ಕಂಡು ಹಿಡಿಯುವುದರಲ್ಲಿ ನಿರತವಾಗಿವೆ. ಒಂದಿಷ್ಟು ದೇಶಗಳು ಮಾನವನ ಮೇಲೆ ಲಸಿಕೆಯನ್ನು ಪ್ರಯೋಗ ಮಾಡಲು ಸಿದ್ದತೆ ನಡೆಸಿದ್ದಾರೆ. ಇದರಲ್ಲಿ ಲಂಡನ್‌ನ ಆಕ್ಸ್‌ಫರ್ಡ್ ವಿವಿ ಕೂಡ ಒಂದು.
ಹೌದು, ಮೂರನೇ ಹಂತದಲ್ಲಿ ಲಸಿಕೆಯನ್ನು ಪ್ರಯೋಗ ಮಾಡಲು ಈ ಯುನಿವರ್ಸಿಟಿ ಮುಂದಾಗಿದೆ. ಈಗಾಗಲೇ ಹಲವು ಮಂದಿಯ ಮೇಲೆ ಅಂದರೆ ಮೂರನೇ ಹಂತದಲ್ಲಿ ಮಾನವರ ಮೇಲೆ ಪ್ರಯೋಗ ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಇಂದು ಸಿಹಿ ಸುದ್ದಿಯೊಂದನ್ನು ಹೊರ ಬೀಳಲಿದೆಯಂತೆ.
ಈ ವಿಚಾರವಾಗಿ ಬ್ರಿಟನ್‌ನ ವಾಹಿನಿಯೊಂದರ ರಾಜಕೀಯ ವಿಭಾಗದ ಸಂಪಾದಕ ರಾಬರ್ಟ್ ಪೆಟ್ಸೋನ್ ಲಸಿಕೆ ಕುರಿತು ನಾಳೆ ಸಕಾರಾತ್ಮಕ ವಿಚಾರ ಹೊರ ಬೀಳಬಹುದು ಎಂದು ಟ್ವಿಟ್ ಮಾಡಿದ್ದಾರೆ. ಹೀಗಾಗಿ ಈ ವಿಚಾರದ ಬಗ್ಗೆ ಹಾಗೂ ಮೂರನೇ ಹಂತದ ಪ್ರಯೋಗದ ಬಗ್ಗೆ ಇಂದು ಮಹತ್ವದ ಮಾಹಿತಿ ಹೊರಬೀಳಬಹುದು.