ಎಂದಾದರೂ ನೀವು ಮಾಡಿಸಿಕೊಂಡ ಹೇರ್ಕಟ್ ಬಗ್ಗೆ ಪಶ್ಚಾತಾಪ ಪಟ್ಟಿದ್ದು ಇದೆಯೇ..? ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಂತೂ ಹೇಗೇಗೋ ಕೂದಲನ್ನ ಕತ್ತರಿಸಿದ್ರೆ ಶಿಕ್ಷೆಯ ಭಯ ಇರ್ತಾ ಇತ್ತು. ಇದೇ ಕಾರಣಕ್ಕೆ ಶಾಲೆಯಲ್ಲಿ ಟೊಪ್ಪಿ ಹಾಕಿಕೊಂಡು ತಿರುಗಾಡುತ್ತಿದ್ದ ವಿದ್ಯಾರ್ಥಿಯನ್ನ ಶಿಕ್ಷಿಸುವ ಬದಲು ಆತನ ಕೂದಲನ್ನ ಸರಿಪಡಿಸಿಕೊಡೋದ್ರ ಮೂಲಕ ಪ್ರಾಂಶುಪಾಲರೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಮೆರಿಕದ ಇಂಡಿಯಾನಾದ ಶಾಲೆಯೊಂದರ ಪ್ರಾಂಶುಪಾಲರಾಗಿದ್ದ ಜಾಸೋನ್ ಸ್ಮಿತ್ ಇಂತಹ ಕೆಲಸವೊಂದನ್ನ ಮಾಡಿದ್ದಾರೆ. ಇದೇ ಶಾಲೆಯ ವಿದ್ಯಾರ್ಥಿ ಆಂಥೋನಿ ಎಂಬಾತ ತಲೆಗೆ ಹಾಕಿದ್ದ ಟೊಪ್ಪಿಯನ್ನ ತೆಗೆಯಲು ನಿರಾಕರಿಸುತ್ತಿದ್ದ ಎನ್ನಲಾಗಿದೆ.
ಶಾಲೆಯಲ್ಲಿ ಟೊಪ್ಪಿ ಧರಿಸೋದ್ರಿಂದ ಸಮವಸ್ತ್ರ ನಿಯಮ ಉಲ್ಲಂಘನೆಯಾಗುತ್ತೆ ಎಂಬ ದೂರಿನ ಬಳಿಕ ಬಾಲಕನ ಜೊತೆ ಪ್ರಾಂಶುಪಾಲ ಮಾತನಾಡಿದ್ದಾರೆ. ಈ ವೇಳೆ ಆ ಬಾಲಕ ನನ್ನ ಪೋಷಕರು ಹೇಳಿದಂತೆ ಕೂದಲು ಕತ್ತರಿಸೋಕೆ ಹೋದೆ. ಆದರೆ ನನಗೆ ಫಲಿತಾಂಶ ಇಷ್ಟವಾಗಲಿಲ್ಲ. ಹೀಗಾಗಿ ಟೊಪ್ಪಿ ಹಾಕಿಕೊಂಡು ತಿರುಗಾಡ್ತಾ ಇದೇನೆ ಎಂದು ಹೇಳಿಕೊಂಡಿದ್ದಾನೆ.
ಇದಾದ ಬಳಿಕ ಸ್ಮಿತ್, ಆ ಬಾಲಕನಿಗೆ ತನ್ನ ಪುತ್ರನಿಗೆ ಈ ಹಿಂದೆ ತಾನು ಮಾಡಿದ ಕಟ್ಟಿಂಗ್ಗಳ ಫೋಟೊ ತೋರಿಸಿದ್ದಾರೆ ಹಾಗೂ ಈ ಸಮಸ್ಯೆಯಿಂದ ಪಾರು ಮಾಡೋದಾಗಿ ಹೇಳಿದ್ದಾರೆ. ಕೂಡಲೇ ಮನೆಗೆ ತೆರಳಿ ಟ್ರಿಮ್ಮರ್ ತೆಗೆದುಕೊಂಡು ಬಂದ ಪ್ರಿನ್ಸ್ ಆತನ ಕೂದಲನ್ನ ಸರಿ ಮಾಡಿದ್ದಾರೆ.