ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂಬ ಕೋಪಕ್ಕೆ ಯುವತಿಯರನ್ನ, ಅವರ ಮನೆ ಮಂದಿಯನ್ನು ಕೊಲೆ ಮಾಡಿರುವ ಹಾಗೂ ಕೊಲೆ ಪ್ರಯತ್ನ ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಇಂತಹದ್ದೇ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ.
ಹೌದು, ಇರಾನ್‌ನ ತೆಹ್ರಾನ್‌ನ ಶಹರಾ-ಎ ಅಸೆಮಾನ್ ಅಪಾರ್ಟ್‌ಮೆಂಟ್ 11 ನೇ ಮಹಡಿಯಿಂದ 16 ವರ್ಷದ ಫಾತಿಮೆ ಘೋಜಾಟ್ ಎಂಬುವವಳನ್ನು ತಳ್ಳಿ ಕೊಲೆ ಮಾಡಲಾಗಿದೆ. ಈಕೆ ಮೊಜ್ತಬಾ ನಾಮ್ದರ್ ಎಂಬಾತನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳಂತೆ. ಮುಜುಗರಕ್ಕೀಡಾತ ಆಕೆ ಇದ್ದ ಅಪಾರ್ಟ್‌ಮೆಂಟ್‌ಗೆ ತೆರಳಿ ಆಕೆ ಮೇಲೆ ಹಲ್ಲೆ ಮಾಡಿ 11ನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ.
ಇನ್ನು ಈ ಹುಡುಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಇನ್ನು ಈ ಘಟನೆ ನಡೆದು ಕೇವಲ ಎರಡೇ ವಾರದಲ್ಲಿ ತನ್ನ ಶಕ್ತಿ ಬಳಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈ ಘಟನೆ ಕುರಿತು ಮಾತನಾಡಿರುವ ಈ ಹುಡುಗಿಯ ತಾಯಿ ಬರಿಹಾ ರೆಹಮಾನಿ, ತಪ್ಪು ಮಾಡಿ ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಹೊರ ಬಂದ ನಂತರ ನನ್ನ ಮಗನಿಗೂ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ನಾವು ಭಯದಿಂದಲೇ ಜೀವನ ನಡೆಸುವಂತಾಗಿದೆ ಎಂದಿದ್ದಾರೆ.