ಸೆಕ್ಸ್ ನಿಂದ ದೂರವಿರುವ ಜೀವನಶೈಲಿ ಹೊಂದಿರುವ ಜನರಿಗಾಗಿ ಯುಎಸ್‌ನ 33 ವರ್ಷದ ಮಹಿಳೆಯೊಬ್ಬಳು ಡೇಟಿಂಗ್ ಅಪ್ಲಿಕೇಶನ್ ರಚಿಸಿದ್ದಾಳೆ.
ಶಾಕಿಯಾ ಸೀಬ್ರೂಕ್ ಎಂಬಾಕೆ, ಲೈಂಗಿಕತೆಯನ್ನು ಹೊಂದಲು ಇಷ್ಟಪಡದ ಜನರಿಗಾಗಿ ಡೇಟಿಂಗ್ ಅಪ್ಲಿಕೇಶನ್ ಅನ್ನು ರಚಿಸಿದ್ದಾಳೆ. ಕಳೆದ ವರ್ಷ ತನ್ನಂತಹ ಜನರಿಗಾಗಿ ‘ದಿ ಸೆಕ್ಸ್‌ಲೆಸ್ ಟ್ರೈಬ್’ ಅನ್ನು ರಚಿಸಿದ್ದರು.
ಮೊದಲಿಗೆ ಈ ಸಮುದಾಯಕ್ಕೆಂದೇ ಟೀ ಶರ್ಟ್ ಗಳನ್ನು ಶಾಕಿಯಾ ಪ್ರಾರಂಭಿಸಿದ್ದಾರೆ. ಆದರೆ ಕೇವಲ ಟೀ ಶರ್ಟ್ ನಿಂದ ಇಂತಹ ಜನರನ್ನು ಗುರುತಿಸಲು ಸಾಧ್ಯವಿಲ್ಲ. ಜನರು ಸಮುದಾಯವನ್ನು ಬಯಸಲು ಇಷ್ಟಪಡುತ್ತಾರೆ. ಇದಕ್ಕಾಗಿ ಇಂತಹ ವ್ಯಕ್ತಿಗಳಿಗೆಂದೇ ಡೇಟಿಂಗ್ ಅಪ್ಲಿಕೇಶನ್ ರಚಿಸಲಾಗಿದೆ. ಇದರಿಂದ ಪರಸ್ಪರ ಪರಿಚಯವಾಗಿ ಒಬ್ಬರನ್ನೊಬ್ಬರು ಸಂಪರ್ಕಿಸಬಹುದು ಎಂದು ಶಾಕಿಯಾ ತಿಳಿಸಿದ್ದಾಳೆ.
ಈ ಅಪ್ಲಿಕೇಶನ್, ಇತರರೊಂದಿಗೆ ಸಂವಹನ ನಡೆಸಲು ಸಮುದಾಯದಂತೆ ಕೆಲಸ ಮಾಡುತ್ತದೆ. ಸಭೆಗಳು, ಪಾರ್ಟಿಗಳು, ತಡರಾತ್ರಿಯ ಚೆಕ್-ಇನ್‌ಗಳು ಮತ್ತು ಈವೆಂಟ್‌ಗಳಂತಹ ಸಂವಾದಾತ್ಮಕ ಮತ್ತು ತೊಡಗಿಸಿಕೊಳ್ಳುವ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್ ನೀಡುತ್ತದೆ ಎಂದು ಶಾಕಿಯಾ ಸೀಬ್ರೂಕ್ ಹೇಳಿದ್ದಾರೆ.
ಪ್ರಸ್ತುತ ಬೀಟಾ ಮೋಡ್‌ನಲ್ಲಿರುವ ಈ ಅಪ್ಲಿಕೇಶನ್ ಜಾಗತಿಕವಾಗಿ ಕೇವಲ 8,000 ಚಂದಾದಾರರನ್ನಷ್ಟೇ ಹೊಂದಿದೆ. ಸೆಕ್ಸ್‌ನಿಂದ ದೂರವಿರುವ ಜೀವನಶೈಲಿಯು ಗೋಚರಿಸುವುದಿಲ್ಲ ಅಥವಾ ಸಾಕಷ್ಟು ಮಾತನಾಡುವುದಿಲ್ಲವಾದ್ದರಿಂದ ಅಂಥವರಿಗಾಗಿ ಅಪ್ಲಿಕೇಶನ್ ಮಾಡಲು ಬಯಸಿದ್ದಾಗಿ ಸೀಬ್ರೂಕ್ ತಿಳಿಸಿದ್ದಾರೆ. ಇನ್ನು ಸೀಬ್ರೂಕ್ ಅಪ್ಲಿಕೇಶನ್ ರಚಿಸಿದ್ದಕ್ಕೆ ಹಲವಾರು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.