ಕೊರೊನಾ ವೈರಸ್ ಹರಡುವ ಮೂಲಕ ವಿಶ್ವಕ್ಕೆ ಆತಂಕ ತಂದೊಡ್ಡಿರುವ ಚೀನಾ ಇದರ ಜೊತೆಗೆ ಲಡಾಕ್ ನೈಜ ಗಡಿರೇಖೆಯ ಬಳಿ ಭಾರತದ ಸೇನೆ ಜೊತೆ ಸಂಘರ್ಷ ನಡೆಸಿದೆ. ಹೀಗಾಗಿ ಭಾರತೀಯರಲ್ಲಿ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಇದರ ಪರಿಣಾಮವಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಹಾಗೂ ಚೀನಾ ಮೂಲದ ಅಪ್ಲಿಕೇಶನ್ ಗಳನ್ನು ತಮ್ಮ ಮೊಬೈಲ್ ಗಳಿಂದ ಭಾರತೀಯರು ತೆಗೆದುಹಾಕಬೇಕೆಂಬ ಅಭಿಯಾನ ನಡೆಯುತ್ತಿದೆ.
ಇದಕ್ಕೆ ಪೂರಕವಾಗಿ ಭಾರತದ ಒನ್ ಟಚ್ ಅಪ್ ಲ್ಯಾಬ್ಸ್ ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿಪಡಿಸಿದ್ದು, ‘ರಿಮೂವ್ ಚೀನಾ ಆಪ್ಸ್’ ಎಂಬ ಹೆಸರಿನ ಇದನ್ನು ಅಳವಡಿಸಿಕೊಂಡರೆ ಚೀನಾ ಮೂಲದ ಅಪ್ ಗಳನ್ನು ಪತ್ತೆ ಹಚ್ಚಿ ಸುಲಭವಾಗಿ ರಿಮೂವ್ ಮಾಡಬಹುದಾಗಿತ್ತು.
ಇದನ್ನು ಪ್ಲೇ ಸ್ಟೋರ್ ನಲ್ಲಿ ಹಾಕಿದ ಕೆಲದಿನಗಳಲ್ಲೇ 50 ಲಕ್ಷಕ್ಕೂ ಅಧಿಕ ಮಂದಿ ಇದನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದರು. ಕಂಪನಿಯ ನೀತಿ-ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಿ ‘ರಿಮೂವ್ ಚೀನಾ ಆಪ್ಸ್’ ಆಪನ್ನು ಇದೀಗ ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿದೆ.