ತಂದೆ ಮಕ್ಕಳ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ ತಂದೆಯೊಬ್ಬನ ಬಣ್ಣ ಬಯಲಾಗಿದೆ. ತಂದೆ ಮಾಡ್ತಿದ್ದ ಕೆಲಸ ಕೇಳಿ ಜನರು ದಂಗಾಗಿದ್ದಾರೆ. ಮೂರು ಹೆಣ್ಣು ಮಕ್ಕಳ ತಂದೆ ಮಕ್ಕಳ ಮೇಲೆಯೇ ಅತ್ಯಾಚಾರವೆಸಗುತ್ತಿದ್ದ.
ಪ್ರತಿ ದಿನ ರಾತ್ರಿ ಮಕ್ಕಳ ಕೋಣೆಗೆ ಬಂದು ಆಸೆ ತೀರಿಸಿಕೊಳ್ತಿದ್ದ ಪಾಪಿ ಮನಸ್ಸಿಗೆ ಬಂದಂತೆ ಥಳಿಸುತ್ತಿದ್ದ. ತಂದೆ ರಾಕ್ಷಸಿ ಕೃತ್ಯಕ್ಕೆ ಬೇಸತ್ತ ಹೆಣ್ಣು ಮಕ್ಕಳು ದೃಢ ನಿರ್ಧಾರ ಕೈಗೊಂಡಿದ್ದಾರೆ. ಕೊಡಲಿಯಿಂದ ತಂದೆ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
2018ರಲ್ಲಿ ಈ ಘಟನೆ ನಡೆದಿದೆ. ಆದ್ರೆ ಕಳೆದ 2 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತಾಯಿ ಸಾವನ್ನಪ್ಪಿದ ಮೇಲೆ ತಂದೆ ವರ್ತನೆ ಸಂಪೂರ್ಣ ಬದಲಾಯ್ತು. ತಂದೆ ರಾಕ್ಷಸನಾದ. ಮೂರು ಮಕ್ಕಳ ಮೇಲೂ ಅತ್ಯಾಚಾರವೆಸಗುತ್ತಿದ್ದನೆಂದು ಮಕ್ಕಳು ಹೇಳಿದ್ದಾರೆ.