ಡೇಟಿಂಗ್ ವಿಷ್ಯದಲ್ಲಿ ಜನರ ಆಸಕ್ತಿ, ಆಯ್ಕೆ ಬದಲಾಗುತ್ತಿದೆ. ಎಕ್ಸ್ಟ್ರಾ ಮ್ಯಾರಿಟಲ್ ಡೇಟಿಂಗ್ ಆ್ಯಪ್ ಗ್ಲೈಡೆನ್ ಇತ್ತೀಚೆಗೆ ಭಾರತೀಯರ ಬಗ್ಗೆ ಸಮೀಕ್ಷೆ ನಡೆಸಿದೆ. ವರದಿಯ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ 34-49 ವರ್ಷ ವಯಸ್ಸಿನ ತನ್ನ 1,000 ಬಳಕೆದಾರರ ಮೇಲೆ ಈ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಮುಂಬೈ, ದೆಹಲಿ, ಎನ್‌ಸಿಆರ್, ಚೆನ್ನೈ, ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನ ಜನರು ಭಾಗವಹಿಸಿದ್ದರು.
ಸಮೀಕ್ಷೆಯಲ್ಲಿ ಶೇಕಡಾ 72 ರಷ್ಟು ಜನರು ಕೋವಿಡ್ -19 ನಿಷೇಧವನ್ನು ತೆಗೆದು ಹಾಕಿದ ನಂತರ ತಮ್ಮ ಆನ್‌ಲೈನ್ ಡೇಟಿಂಗ್ ಪಾರ್ಟನರ್ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಸಮೀಕ್ಷೆಯಲ್ಲಿ ಅನೇಕ ಜನರು ದಾಂಪತ್ಯ ದ್ರೋಹವನ್ನು ಅಪರಾಧವೆಂದು ಪರಿಗಣಿಸಿದ್ದಾರೆ. ಮೋಸದ ಪಾಲುದಾರನನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಅನೇಕ ಜನರು ಮೋಸದ ಹೊರತಾಗಿಯೂ ಪಾಲುದಾರರಿಗೆ ಎರಡನೇ ಅವಕಾಶವನ್ನು ನೀಡಲು ಸಿದ್ಧರಾಗಿದ್ದಾರೆ.
ಸಮೀಕ್ಷೆಯ ವರದಿಯ ಪ್ರಕಾರ, ಶೇಕಡಾ 36 .9 ರಷ್ಟು ಜನರು ಮೋಸ ಹೋದರೂ ಸಹ ತಮ್ಮ ಪಾಲುದಾರರನ್ನು ಬೇಷರತ್ತಾಗಿ ಕ್ಷಮಿಸಲು ಸಿದ್ಧರಿದ್ದಾರಂತೆ. ಶೇಕಡಾ 40.1 ರಷ್ಟು ಜನರು ತಮ್ಮ ಭವಿಷ್ಯವು ಮೋಸದ ಕಾರಣವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಶೇಕಡಾ 23ರಷ್ಟು ಜನರು ಮೋಸ ಹೋದ ನಂತರ ಸಂಬಂಧದಿಂದ ಹೊರ ಬರಲು ಬಯಸಿದ್ದಾರೆ.