ಕೊರೊನಾ ಲಸಿಕೆ ಓಟದಲ್ಲಿ ರಷ್ಯಾ ಮುಂದಿದೆ. ವರದಿ ಪ್ರಕಾರ ರಷ್ಯಾ ಮೂರನೇ ಲಸಿಕೆ ಪ್ರಯೋಗ ಮಾಡ್ತಿದೆ. ರಷ್ಯಾ ಮೊದಲು ಸ್ಪುಟ್ನಿಕ್ ವಿ ಲಸಿಕೆಯನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಿದೆ. ಅಕ್ಟೋಬರ್ 14ರಂದು ಎಪಿವಾಕ್ ಕೊರೊನಾ ಲಸಿಕೆ ಬಿಡುಗಡೆ ಮಾಡಿದೆ. ಈಗ ಮತ್ತೊಂದು ಲಸಿಕೆ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಮೂರನೇ ಲಸಿಕೆಯನ್ನು ರಷ್ಯಾದ ಅಕಾಡೆಮಿ ಆಫ್ ಸೈನ್ಸ್ ನ ಚುಮಾಕೋವ್ ಕೇಂದ್ರದಲ್ಲಿ ತಯಾರಿಸಲಾಗುತ್ತಿದೆ. ಈ ಲಸಿಕೆಯನ್ನು ಡಿಸೆಂಬರ್ 2020 ರೊಳಗೆ ಅನುಮೋದಿಸುವ ಸಾಧ್ಯತೆಯಿದೆ. ಮೊದಲ ಮತ್ತು ಎರಡನೇ ಹಂತದ ಪ್ರಯೋಗಕ್ಕೆ ಈಗಾಗಲೇ ಅನುಮತಿ ಸಿಕ್ಕಿದೆ.
ಅಕ್ಟೋಬರ್ 6 ರಂದು 15 ಸ್ವಯಂಸೇವಕರಿಗೆ ಮೊದಲ ಹಂತದ ಪ್ರಯೋಗ ನಡೆದಿದೆ. ಇವುಗಳಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಈ ಲಸಿಕೆ ಪ್ರಯೋಗದ ಎರಡನೇ ಹಂತವನ್ನು ಅಕ್ಟೋಬರ್ 19 ರಂದು 285 ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗುವುದು.
ಈ ಲಸಿಕೆಯ ಕ್ಲಿನಿಕಲ್ ಪ್ರಯೋಗವು ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಷ್ಯಾ ಯಾವುದೇ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಯೋಗ ಮಾಡಿಲ್ಲ. ಸ್ಪುಟ್ನಿಕ್ ವಿಗಿಂತ ಎಪಿವಾಕ್ ಕೊರೊನಾ ಹೆಚ್ಚು ಪರಿಣಾಮಕಾರಿ ಲಸಿಕೆ ಎನ್ನಲಾಗ್ತಿದೆ.