ಮಾರಣಾಂತಿಕ ಕೊರೊನಾ ಮಹಾಮಾರಿಯಿಂದ ಪಾರಾಗಲು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಜೊತೆಗೆ ಆಗಾಗ ಕೈತೊಳೆದುಕೊಳ್ಳುವುದು ಸೂಕ್ತ.
ಬಟ್ಟೆಯಿಂದ ತಯಾರಿಸಲಾಗಿರುವ ಮಾಸ್ಕ್, ಕೊರೊನಾ ತಡೆಗೆ ಸೂಕ್ತ ಎಂದು ಹೇಳಲಾಗುತ್ತದೆ. ಆದರೆ ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ ನೀಡಿದೆ.
ಎಲ್ಲ ರೀತಿಯ ಮಾಸ್ಕ್ ಗಳಿಂದಲೂ ಕೊರೊನಾ ತಡೆಯುವುದು ಸಾಧ್ಯವಿಲ್ಲ ಎಂದು ಎಚ್ಚರಿಸಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದಲ್ಲಿ ಬಟ್ಟೆಯಿಂದ ತಯಾರಿಸಲಾದ ಮಾಸ್ಕ್ ಪರಿಣಾಮಕಾರಿಯಲ್ಲ ಎಂದು ತಿಳಿಸಲಾಗಿದೆ.
ಕೈಗಳು ಸ್ವಚ್ಛವಾಗಿದ್ದು, ಜೊತೆಗೆ ಸುತ್ತಮುತ್ತ ಕನಿಷ್ಠ ಆರು ಅಡಿಗಳ ಅಂತರ ಪಾಲಿಸಿದರೆ ಮಾತ್ರ ಬಟ್ಟೆಯ ಮಾಸ್ಕ್ ಉಪಯುಕ್ತವಾಗಿರುತ್ತದೆ ಎಂದು ತಿಳಿಸಲಾಗಿದ್ದು, 60 ವರ್ಷ ಮೇಲ್ಪಟ್ಟವರು ಹಾಗೂ ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಬಟ್ಟೆಯಿಂದ ತಯಾರಿಸಲಾದ ಮಾಸ್ಕ್ ಬದಲಿಗೆ ವೈದ್ಯಕೀಯ ಮಾಸ್ಕ್ ಧರಿಸುವುದು ಸೂಕ್ತ ಎಂದು ಹೇಳಲಾಗಿದೆ.