ಲಂಡನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದ್ರ ಮಧ್ಯೆ ವ್ಯಕ್ತಿಯೊಬ್ಬ ಮಾಸ್ಕನ್ನು ಒಳ ಉಡುಪು ಮಾಡಿಕೊಂಡು ರಸ್ತೆಗಿಳಿದಿದ್ದಾನೆ. ಬರಿ ಒಳ ಉಡುಪನ್ನು ಮಾತ್ರ ಧರಿಸಿದ್ದ ವ್ಯಕ್ತಿಯನ್ನು ನೋಡಿ ಜನರು ದಂಗಾಗಿದ್ದಾರೆ. ಅನೇಕರು ಆತನ ಫೋಟೋ ಕ್ಲಿಕ್ಕಿಸಿದ್ದಾರೆ.
ಕೊರೊನಾ ವೈರಸ್ ಹೆಚ್ಚಾದ ಕಾರಣ ಲಂಡನ್ ನಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಕೆಲ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದೆ ಬರುವ ಗ್ರಾಹಕರಿಗೆ ವಸ್ತುಗಳನ್ನು ನೀಡುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ವ್ಯಕ್ತಿ ಮಾಸ್ಕ್ ಧರಿಸದೆ, ಮಾಸ್ಕನ್ನು ಒಳ ಉಡುಪು ಮಾಡಿಕೊಂಡು ಬಂದಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆಕ್ಸ್ಫರ್ಡ್ ಸ್ಟ್ರೀಟ್ನಲ್ಲಿ ನಡೆಯುತ್ತಿರುವ ಈ ಯುವಕನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಆದ್ರೆ ವ್ಯಕ್ತಿ ಯಾರು, ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾನೆಂಬುದು ಗೊತ್ತಾಗಿಲ್ಲ. ಆತನ ವಿರುದ್ಧ ಪೊಲೀಸರು ಕ್ರಮಕೈಗೊಂಡಿರುವ ಬಗ್ಗೆಯೂ ವರದಿಯಾಗಿಲ್ಲ. ಬ್ರಿಟನ್ ನಲ್ಲಿ ಸುಮಾರು 3 ಮಿಲಿಯನ್ ಮಂದಿಗೆ ಕೊರೊನಾ ಸೋಂಕಿದೆ.