ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಜೊತೆ ಆಗಾಗ ಕೈ ತೊಳೆದುಕೊಳ್ಳುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಅಥವಾ ಸೋಪ್ ನಿಂದ ಕೈತೊಳೆಯುವಂತೆ ಸಲಹೆ ನೀಡಲಾಗಿದೆ. ಆದ್ರೆ ಇದಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ ಹೊರಗೆ ಬಿದ್ದಿದೆ.
ಶುದ್ಧ ನೀರು ಹಾಗೂ ಸೋಪ್ ನಿಂದ ಕೈತೊಳೆಯುವುದು ಈಗ್ಲೂ ಅನೇಕರಿಗೆ ಕನಸು. ಯಸ್, ವಿಶ್ವದಲ್ಲಿ 300 ಕೋಟಿ ಜನರ ಬಳಿ ಕೈ ತೊಳೆಯಲು ಬೇಕಾದ ಸಂಪನ್ಮೂಲವಿಲ್ಲ. ಎನ್‌ಐಸಿಇಎಫ್ ಮತ್ತು ಡಬ್ಲ್ಯುಎಚ್‌ಒನ ಸಾಮಾನ್ಯ ಮಾನಿಟರಿಂಗ್ ವರದಿ 2019ರ ಪ್ರಕಾರ ಇವರ ಬಳಿ ಸೋಪ್ ಮತ್ತು ಶುದ್ಧ ನೀರಿಲ್ಲ.
ವಿಶ್ವದ ಜನಸಂಖ್ಯೆಯ ಶೇಕಡಾ 40ರಷ್ಟು ಮಂದಿಗೆ ಕೈತೊಳೆಯಲು ಬೇಕಾದ ಸಂಪನ್ಮೂಲ ಇಲ್ಲದಂತಾಗಿದೆ. ದೇಶದ ಜನಸಂಖ್ಯೆಯ ಶೇಕಡಾ 60ರಷ್ಟು ಕುಟುಂಬಗಳು ಮಾತ್ರ ಸೋಪ್ ಖರೀದಿಸುವ ಸಾಮರ್ಥ್ಯ ಹೊಂದಿವೆ. ಗ್ರಾಮೀಣ ಪ್ರದೇಶದಲ್ಲಿ ಇದ್ರ ಪ್ರಮಾಣ ತುಂಬಾ ಕಡಿಮೆಯಿದೆ. 2019ರಲ್ಲಿ ಬಂದ ಇನ್ನೊಂದು ವರದಿಯಲ್ಲಿ ಆಹಾರ ಸೇವನೆಗಿಂತ ಮೊದಲು ಗ್ರಾಮೀಣ ಪ್ರದೇಶದ ಶೇಕಡಾ 25.3 ಮಂದಿ ಹಾಗೂ ನಗರ ಪ್ರದೇಶದ ಶೇಕಡಾ 56 ಮಂದಿ ಕೈ ತೊಳೆಯುತ್ತಾರೆ ಎನ್ನಲಾಗಿತ್ತು. ಶೇಕಡಾ 2.7ರಷ್ಟು ಮಂದಿ ಮರಳು, ಮಣ್ಣು, ಬೂದಿಯಿಂದ ಕೈ ತೊಳೆಯುತ್ತಾರಂತೆ. ಅಕ್ಟೋಬರ್ 15ರಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗಿದೆ. ಕೈ ತೊಳೆಯುವ ಮಹತ್ವ ಸಾರುವುದು ಇದ್ರ ಉದ್ದೇಶವಾಗಿತ್ತು.