ರೈಲು, ಬಸ್ಸು, ಕಾರು, ವಿಮಾನ, ಬುಲೆಟ್ ಟ್ರೈನ್ ಎಲ್ಲದರಲ್ಲೂ ಓಡಾಡಿ ಮುಗಿಯಿತು. ಇನ್ನು ಬಾಹ್ಯಾಕಾಶಕ್ಕೆ ಭೇಟಿ ನೀಡೋಣ ಎಂದುಕೊಂಡವರಿಗೆ ಇಲ್ಲಿದೆ ಚಾನ್ಸ್.
ಕಂಪ್ಯೂಟರ್ ಮುಂದೆ ಕುಳಿತು ಒಂದು ಬಟನ್ ಒತ್ತಿದರೆ ಸಾಕು, ಬಾಹ್ಯಾಕಾಶ ಕೇಂದ್ರ ತಲುಪುತ್ತೇವೆ. ಈ ಮೂಲಕ ನಾವೂ ಇನ್ನು ಮುಂದೆ ಗಗನಯಾನಿಗಳಾಗಬಹುದು. ಹಾಗೆಂದು ಅಲ್ಲಿಗೆ ನೇರವಾಗಿ ನಾವು ಹೋಗಲೇಬೇಕೆಂದಿಲ್ಲ. ಆದರೆ ಗೂಗಲ್ ಮ್ಯಾಪ್ಸ್ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ.
ಗೂಗಲ್ ಕಲೆ ಮತ್ತು ಸಾಂಸ್ಕೃತಿಕ ಪರಿಕಲ್ಪನೆಯಡಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಕಂಪ್ಯೂಟರ್ ಮುಂದೆ ಕುಳಿತವರು ಕರ್ಸರ್ ಬಳಸಿಯೇ ಸ್ಪೇಸ್ ಸ್ಟೇಷನ್ ನ 360 ಡಿಗ್ರಿ ವೀವ್ ಪಡೆಯಬಹುದಾಗಿದೆ.