ಮದ್ಯದ ದೊರೆ ವಿಜಯ್ ಮಲ್ಯ ಭಾರತೀಯ ಬ್ಯಾಂಕ್‌ಗಳಲ್ಲಿ ಸುಮಾರು 9000 ಕೋಟಿ ರೂ. ಸಾಲವನ್ನು ಮರು ಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಯನನ್ನು ಭಾರತಕ್ಕೆ ಕರೆತಂದು ಶಿಕ್ಷೆ ನೀಡಲು ಭಾರತೀಯ ತನಿಖಾ ತಂಡಗಳು ಮುಂದಾಗಿವೆ. ಇನ್ನೇನು ಎಲ್ಲಾ ಪ್ರಕ್ರಿಯೆ ಮುಗಿಯಿತು ಭಾರತಕ್ಕೆ ಮಲ್ಯ ವಾಪಸ್ಸಾಗುತ್ತಾರೆ ಎಂಬ ನಿರೀಕ್ಷೆ ಇದೀಗ ಮತ್ತೊಮ್ಮೆ ಹುಸಿಯಾಗಿದೆ. ಮಲ್ಯ ಭಾರತಕ್ಕೆ ಬರಲು ಮತ್ತೆ ಕಾನೂನು ತೊಡಕಾಗಿದೆ.
ಹೌದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಿನ್ನೆ ರಾತ್ರಿಯೇ ಮಲ್ಯ ಭಾರತಕ್ಕೆ ಬರಬೇಕಿತ್ತು. ಆದರೆ ಇದೀಗ ಮತ್ತೊಂದು ಕಾನೂನು ತೊಡಕಾಗಿದೆ. ಲಂಡನ್ ಹೈಕೋರ್ಟ್ ಹಸ್ತಾಂತರ ಆದೇಶಕ್ಕೆ ಇಂಗ್ಲೆಂಡ್‌ನ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಮಲ್ಯರನ್ನು ಇನ್ನೇನು ಭಾರತಕ್ಕೆ ವಾಪಸ್ ಕರೆತರಲಾಗುತ್ತೆ ಎನ್ನುತ್ತಿದ್ದಂತೆಯೇ ಕೊನೆಯ ಕ್ಷಣದಲ್ಲಿ ಸಮಸ್ಯೆಯಾಗಿದೆ.
ಇನ್ನು ಈ ಸಮಸ್ಯೆ ಗೌಪ್ಯವಾಗಿರುವುದರಿಂದ ಹೆಚ್ಚಿನ ವಿವರ ನೀಡಲು ಆಗಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಲ್ಯ ರಾಜಾಶ್ರಯದ ಅರ್ಜಿ ಇತ್ಯರ್ಥವಾಗಿಲ್ಲ ಎಂದು ಹೇಳುತ್ತಿವೆ ಮೂಲಗಳು. ಇದೇ ವಿಚಾರವೇ ಹಸ್ತಾಂತರ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವುದಕ್ಕೆ ಕಾರಣ ಎನ್ನಲಾಗಿದೆ.