ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಒಳ್ಳೆ ಸುದ್ದಿಯೊಂದು ಸಿಕ್ಕಿದೆ. ವಿಜ್ಞಾನಿಗಳು ಶೇಕಡಾ 99.9 ಕೋವಿಡ್ ಕಣವನ್ನು ಕೊಲ್ಲುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರವು ಕೊರೊನಾ ವಿರುದ್ಧದ ಯುದ್ಧದಲ್ಲಿ ಪರಿಣಾಮಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಮೆನ್ಜೀಸ್ ಹೆಲ್ತ್ ಇನ್ಸ್ಟಿಟ್ಯೂಟ್ನ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಈ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರವು ಕ್ಷಿಪಣಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ಮೊದಲು ಕೊರೊನಾ ಎಲ್ಲಿದೆ ಎಂಬುದನ್ನು ಪತ್ತೆ ಮಾಡುತ್ತದೆ. ನಂತ್ರ ವೈರಸ್ ನಾಶ ಪಡಿಸುತ್ತದೆ.
ಇದು ಹೀಟ್ ಸೀಕಿಂಗ್ ಮಿಸಾಯಿಲ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೊರೊನಾ ವೈರಸ್ ನಿಂದ ಆಗುವ ಸಾವನ್ನು ಇದು ಕಡಿಮೆ ಮಾಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಚಿಕಿತ್ಸೆಯ ಸಹಾಯದಿಂದ ವ್ಯಕ್ತಿಯ ಶ್ವಾಸಕೋಶದಲ್ಲಿ ಇರುವ ವೈರಸ್ ಪತ್ತೆ ಹಚ್ಚಿ ನಾಶಪಡಿಸಬಹುದು. ಚಿಕಿತ್ಸೆಯು ಜೀನ್-ಸೈಲೆನ್ಸಿಂಗ್ ಎಂಬ ವೈದ್ಯಕೀಯ ತಂತ್ರವನ್ನು ಆಧರಿಸಿದೆ. ಇದು ಆರ್‌ಎನ್‌ಎಯ ಸಣ್ಣ ತುಣುಕುಗಳೊಂದಿಗೆ ಕೆಲಸ ಮಾಡುವ ತಂತ್ರವಾಗಿದೆ.