ಕೊರೊನಾ ಕರಿ ನೆರಳು ಇಡೀ ದೇಶಕ್ಕೆ ಆವರಿಸಿದ್ದು, ಇದರಿಂದ ಪಾರಾಗುವ ದಾರಿ ಇನ್ನೂ ಹುಡುಕುತ್ತಲೇ ಇದ್ದೇವೆ. ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದೆ. ಯಾವಾಗಪ್ಪ ಇದರಿಂದ ಮುಕ್ತಿಯಾಗೋದು. ಕೊರೊನಾದಿಂದ ಮುಕ್ತಿಯಾಗುವ ದಿನಗಳು ಆದಷ್ಟು ಬೇಗ ಬರಲಿ ಎಂದು ಆ ದೇವರನ್ನು ಬೇಡಿಕೊಳ್ಳುತ್ತಲೇ ಇದ್ದೇವೆ. ಈ ಕೊರೊನಾ ಆರ್ಭಟದ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ವಿಚಾರ ಹೇಳಿದೆ.
ನಾವೆಲ್ಲ ಆರು ತಿಂಗಳಿಂದಲೂ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ವೈರಸ್ ಹೋಗುತ್ತದೆ ಎಂಬ ಭರವಸೆ ಮೇಲೆಯೇ ಹೋರಾಡುವಂತಾಗಿದೆ. ಆದರೆ ಮುಂದಿನ ದಿನಗಳು ಇನ್ನೂ ಕಠಿಣವಾಗಲಿದೆ. ಇದಕ್ಕಿಂತ ಕೆಟ್ಟದ್ದು ಮುಂದಿನ ದಿನಗಳಲ್ಲಿ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಮೂಲಕ ಕೊರೊನಾದಿಂದ ಬಚಾವಾದರೂ ಮತ್ತೊಂದು ಗಂಡಾಂತರ ಕಾದಿದೆಯಾ ಎಂಬ ಅನುಮಾನ ಕಾಡತೊಡಗಿದೆ.
ಈಗಾಗಲೇ ಕೊರೊನಾ ಕೋಟ್ಯಾಂತರ ಮಂದಿಯನ್ನು ಆವರಿಸಿದೆ. ಇದರ ನಡುವೆ ಮುಂದಿನ ದಿನಗಳು ಕಷ್ಟವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾತು ಎಲ್ಲರನ್ನು ಮತ್ತಷ್ಟು ಕುಗ್ಗಿಸುತ್ತಿದೆ. ಆದರೆ ಇದಕ್ಕೆ ಕುಗ್ಗದೇ ಏನೇ ಬಂದರೂ ಎದುರಿಸೋಣ. ನಮ್ಮ ಸುರಕ್ಷತೆಯಲ್ಲಿ ನಾವಿರೋಣ. ನಿಮ್ಮ ಜೊತೆ ನಾವಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟ್ರೆಡೋಸ್ ಅದಾನೋಮ್ ಗೆಬ್ರಿಯಾಸ್ ಹೇಳಿದ್ದಾರೆ.