ಕೊರೊನಾ ವೈರಸ್ ಕಾರಣಕ್ಕೆ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಎಲ್ಲ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಇದ್ರಿಂದ ಅನೇಕ ವಸ್ತುಗಳ ಅಭಾವವುಂಟಾಗಿತ್ತು. ಅದ್ರಲ್ಲಿ ಕಾಂಡೋಮ್ ಕೂಡ ಒಂದು. ಬೇಡಿಕೆಗೆ ತಕ್ಕಷ್ಟು ಕಾಂಡೋಮ್ ಲಾಕ್ ಡೌನ್ ಸಂದರ್ಭದಲ್ಲಿ ಅನೇಕರಿಗೆ ಸಿಗಲಿಲ್ಲ. ಈ ಮಧ್ಯೆ ವಿಯೆಟ್ನಾಂ ಕಾರ್ಖಾನೆಯೊಂದ ಬಗ್ಗೆ ಈಗ ಚರ್ಚೆಯಾಗ್ತಿದೆ. ಕಾರ್ಖಾನೆಯಲ್ಲಿ ಬಳಸಿದ ಕಾಂಡೋಮ್ ಗಳು ಸಿಕ್ಕಿವೆ.
ಬಳಸಿದ ಕಾಂಡೋಮ್ ಗಳನ್ನು ತೊಳೆದು ಮತ್ತೆ ಮಾರಾಟ ಮಾಡಲಾಗ್ತಾಯಿತ್ತು. ಟಿವಿ ಚಾನೆಲ್ ಒಂದು ಇದ್ರ ವರದಿ ಮಾಡಿತ್ತು. ಕಾರ್ಖಾನೆ ಗೋದಾಮಿನಲ್ಲಿ ಮೂರೂವರೆ ಲಕ್ಷ ಕಾಂಡೋಮ್ ಇತ್ತು ಎನ್ನಲಾಗಿದೆ. ಎಲ್ಲವೂ ಬಳಸಿದ ಕಾಂಡೋಮ್. ಕಾಂಡೋಮ್ ತುಂಬಿದ್ದ ಚೀಲ ಸುಮಾರು 360 ಕೆ.ಜಿ.ಯಿತ್ತು ಎಂದು ಚಾನೆಲ್ ವರದಿ ಮಾಡಿತ್ತು.
ಅಪರಿಚಿತ ವ್ಯಕ್ತಿಗಳಿಂದ ಪ್ರತಿ ತಿಂಗಳು ಬಳಸಿದ ಕಾಂಡೋಮ್ ಗಳನ್ನು ಮಾಲೀಕ ಪಡೆಯುತ್ತಿದ್ದನಂತೆ. ಮೊದಲು ಕಾಂಡೋಮ್ ಗಳನ್ನು ಕುದಿಯುವ ನೀರಿನಲ್ಲಿ ಹಾಕಿ ನಂತ್ರ ಒಣಗಿಸಲಾಗುತ್ತಿತ್ತಂತೆ. ನಂತ್ರ ಅದನ್ನು ಪ್ಯಾಕ್ ಮಾಡಲಾಗ್ತಿತ್ತು. ಈಗಾಗಲೇ ಸಾವಿರಾರು ಬಳಸಿದ ಕಾಂಡೋಮ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.