ಐಫೋನ್ 14 ಬಗ್ಗೆ ಮೊಬೈಲ್ ಪ್ರಿಯರಲ್ಲಿ ಸಾಕಷ್ಟು ಕುತೂಹಲವಿದೆ. ಆಪಲ್ ಕಂಪನಿ ಅದರಲ್ಲಿ ಯಾವ್ಯಾವ ಹೊಸ ಟೆಕ್ನಾಲಜಿಗಳನ್ನು ಅಳವಡಿಸಬಹುದು ಅನ್ನೋದನ್ನು ನೋಡಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ.
ಐಫೋನ್ 14ಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನು ಆಪಲ್ ಕಂಪನಿ ಬಿಟ್ಟುಕೊಟ್ಟಿಲ್ಲ. ಆದ್ರೆ ಕೆಲವೊಂದು ಕುತೂಹಲಕಾರಿ ಅಂಶಗಳು ಸೋರಿಕೆಯಾಗುತ್ತಲೇ ಇವೆ. ಬಣ್ಣ ಬದಲಾಯಿಸುವ ಐಫೋನ್ ಅನ್ನು ಆಪಲ್ ಕಂಪನಿ ಲಾಂಚ್ ಮಾಡಲಿದೆ ಅನ್ನೋದು ಲೇಟೆಸ್ಟ್ ಸುದ್ದಿ.
ಆಪಲ್ ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಬಣ್ಣ ರೂಪಾಂತರಗಳ ಆಪ್ಷನ್ ಇರಲಿದೆಯಂತೆ. ಚೀನಾದ ವೈಬೋ ಪೋಸ್ಟ್ ಒಂದರಲ್ಲಿ ಐಫೋನ್ 14 ಬಗೆಗಿನ ಈ ಹೊಸ ತಂತ್ರಜ್ಞಾನದ ಬಗ್ಗೆ ಪೋಸ್ಟ್ ಮಾಡಲಾಗಿದೆ. ಆದ್ರೀಗ ಆ ಪೋಸ್ಟ್ ಅನ್ನು ಡಿಲೀಟ್ ಸಹ ಮಾಡಿರೋದು ಕುತೂಹಲ ಮೂಡಿಸಿದೆ.
ಆಪಲ್ ಟ್ರ್ಯಾಕ್ ವರದಿಯ ಪ್ರಕಾರ ವರದಿಯ ಪ್ರಕಾರ, iPhone 14 ಮತ್ತು iPhone 14 Pro Max ಅನ್ನು ಕಪ್ಪು, ಬಿಳಿ, ಕೆಂಪು, ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ಪರಿಚಯಿಸಬಹುದು. ಆದರೆ iPhone 14 Pro ಮತ್ತು iPhone 14 Pro Max ಗ್ರ್ಯಾಫೈಟ್, ಗೋಲ್ಡ್, ಸಿಲ್ವರ್ ಮತ್ತು ನೇರಳೆ ಬಣ್ಣಗಳಲ್ಲಿ ಬರಲಿದೆಯಂತೆ.
ವಿಶೇಷವೆಂದರೆ ಐಫೋನ್ 14 ಸರಣಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳ ನೇರಳೆ ರೂಪಾಂತರಗಳು ವಿಶೇಷ ಶಿಫ್ಟ್ ಟೋನ್‌ನೊಂದಿಗೆ ಬರುತ್ತವೆ. ಅದು ಬೆಳಕಿಗೆ ತಕ್ಕಂತೆ ಬಣ್ಣವನ್ನು ಬದಲಾಯಿಸುತ್ತದೆ. ಈ ವರ್ಷ ಸಪ್ಟೆಂಬರ್‌ನಲ್ಲಿ ಐಫೋನ್ 14 ಲಾಂಚ್ ಆಗುವ ಸಾಧ್ಯತೆ ಇದೆ.