ವಿಶ್ವದ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಹಾಗೂ ಮೊದಲೇ ಅನಾರೋಗ್ಯಕ್ಕೊಳಗಾದವರನ್ನು ಕಾಡುತ್ತದೆ ಎನ್ನಲಾಗಿತ್ತು.
ನಂತ್ರ ಬೊಜ್ಜಿನ ವ್ಯಕ್ತಿಗಳಿಗೆ ಕೊರೊನಾ ಕಾಡಲಿದೆ ಎನ್ನಲಾಗಿತ್ತು. ಕೊರೊನಾ ಮಹಿಳೆಯರಿಗಿಂತ ಪುರುಷರನ್ನು ಕಾಡುತ್ತದೆ. ಪುರುಷರ ಸಾವಿನ ಸಂಖ್ಯೆ ಹೆಚ್ಚು ಎಂದು ಸಂಶೋಧನೆಯೊಂದು ಹೇಳಿತ್ತು. ಈಗ ಕೊರೊನಾ ಬಗ್ಗೆ ಮತ್ತೊಂದು ಸಂಗತಿ ಹೇಳಲಾಗಿದೆ.
ಕೊರೊನಾ ಬಗ್ಗೆ ಸ್ವೀಡನ್ ಸ್ಟಾಕ್ಹೋಮ್ ವಿಶ್ವವಿದ್ಯಾಲಯ ಸಂಶೋಧನೆಯೊಂದನ್ನು ನಡೆಸಿದೆ. ಸ್ವೀಡನ್ ನಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಜನರ ಅಂಕಿ-ಅಂಶದ ಆಧಾರದ ಮೇಲೆ ಸಂಶೋಧನೆ ನಡೆದಿದೆ. ಸಂಶೋಧನೆಯಲ್ಲಿ 20 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಜನರ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಮಾಡುವ ಪ್ರಯತ್ನ ನಡೆದಿದೆ.
ಸಂಶೋಧನಾ ವರದಿ ಪ್ರಕಾರ, ಬಡವರು, ಕಡಿಮೆ ಮಟ್ಟದ ಶಿಕ್ಷಣ ಪಡೆದವರು, ಮದುವೆಯಾಗದ ಯುವಕರ ಸಾವಿನ ಸಂಖ್ಯೆ ಹೆಚ್ಚಿದೆಯಂತೆ. ಸ್ವೀಡನ್ ನಲ್ಲಿ ಕಡಿಮೆ ಕಲಿತ ಹಾಗೂ ಕಡಿಮೆ ಆದಾಯ ಹೊಂದಿದ ಯುವಕರು ಕೊರೊನಾಗೆ ಹೆಚ್ಚು ಸಾವನ್ನಪ್ಪಿದ್ದಾರೆ. ಹಾಗೆ ವಿವಾಹವಾದ ಮಹಿಳೆ, ಪುರುಷರಿಗಿಂತ ಶೇಕಡಾ 1.5 ರಷ್ಟು ಅಪಾಯ ಮದುವೆಯಾಗದ ಯುವಕ, ಯುವತಿಯರಿಗೆ ಎಂದು ಸಂಶೋಧನೆ ಹೇಳಿದೆ.