ಮಳೆಗಾಲ ಶುರುವಾಗಿದೆ. ಕೆಲವೇ ತಿಂಗಳಲ್ಲಿ ಚಳಿಗಾಲ ಬರಲಿದೆ. ಚಳಿಗಾಲ ಸಾಕಷ್ಟು ಅನುಕೂಲಕರವಾಗಿರುತ್ತೆ.
ತೂಕ ಇಳಿಕೆಯಿಂದ ಹಿಡಿದು ಪ್ರೀತಿ ಹೆಚ್ಚಿಸಲು ಚುಮುಚುಮು ಚಳಿ ನೆರವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ನವಜೋಡಿಗೆ ಹಬ್ಬ.
ಚಳಿಗಾಲದ ಸೆಕ್ಸ್ ಗೆ ಬೆಳಗಿನ ಜಾವ ಬೆಸ್ಟ್. ಅಧ್ಯಯನದ ಪ್ರಕಾರ ರಾತ್ರಿ ಬದಲು ಬೆಳಗಿನ ಜಾವ ಶಾರೀರಿಕ ಸಂಬಂಧ ಬೆಳೆಸಿದ್ರೆ ದಿನ ಚೆನ್ನಾಗಿರಬಲ್ಲದು. ಪ್ರತಿ ರಾತ್ರಿ, ಬೆಳಗಿನ ಜಾವಕ್ಕೆ ಮನಸ್ಸು ಹಾತೊರೆಯುತ್ತದೆ ಎಂದು ತಜ್ಞರು ಹೇಳಿದ್ದಾರೆ. ಹುಡುಗರ ಟೆಸ್ಟೋಸ್ಟೆರಾನ್ ಮಟ್ಟವು ದಿನಕ್ಕಿಂತ ಹೆಚ್ಚಾಗಿ ಸಂಜೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ರಾತ್ರಿ ಸಂಭೋಗದ ಬಯಕೆ ಹೊಂದಿದ್ದರೂ ಸಂಪೂರ್ಣವಾಗಿ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ 5 ಅಥವಾ 6 ಕ್ಕೆ ಟೆಸ್ಟೋಸ್ಟೆರಾನ್ ಮಟ್ಟವು ಉತ್ತುಂಗದಲ್ಲಿದ್ದು, ಲೈಂಗಿಕತೆ ಆನಂದಿಸಬಹುದಾಗಿದೆ.
ಈ ವೇಳೆ ಸ್ಟೋಸ್ಟೆರಾನ್ ಮಟ್ಟ ಶೇಕಡಾ 25 ರಿಂದ 30ರಷ್ಟು ಹೆಚ್ಚಾಗುತ್ತದೆ. ಅಕಾಲಿಕ ಸ್ಖಲನ ಕಾಡುವುದಿಲ್ಲ. ಸಂಪೂರ್ಣ ಆನಂದ ಸಿಗುತ್ತದೆ ಎಂದು ತಜ್ಞರು ಹೇಳಿದ್ದಾರೆ.