ಮದುವೆಯ ನಂತರವೂ ಅನೇಕ ಬಾರಿ ಜನರು ತಮ್ಮ ಮಾಜಿ ಗೆಳೆಯ, ಗೆಳತಿಯರನ್ನು ಮರೆಯುವುದಿಲ್ಲ. ಮಾಜಿಗಳ ಹೆಸರನ್ನು ಪಾಸ್ವರ್ಡ್ ಆಗಿ ಬಳಸುವವರಿದ್ದಾರೆ. ಈಗ ಇಂತ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬಳಿಗೆ ತನ್ನ ಗಂಡನ ಎಲ್ಲ ಖಾತೆಯ ಪಾಸ್ವರ್ಡ್ ಮಾಜಿ ಪ್ರೇಯಸಿ ಹೆಸರು ಎಂಬುದು ಗೊತ್ತಾಗಿದೆ. ಇದ್ರಿಂದ ನೊಂದ ಆಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. ಮುಂದೇನು ಮಾಡಬೇಕೆಂಬ ಬಗ್ಗೆ ತಜ್ಞರ ಸಲಹೆ ಕೇಳಿದ್ದಾಳೆ.
ಮದುವೆಯಾದ ಕೆಲವು ತಿಂಗಳುಗಳ ನಂತರ ಅವಳಿಗೆ ಗಂಡ ಮದುವೆಗೂ ಮುನ್ನ ಸಂಬಂಧ ಹೊಂದಿದ್ದ ಎಂಬುದು ಗೊತ್ತಾಗಿದೆ. ಇಬ್ಬರ ಮಧ್ಯೆ ಸಾಕಷ್ಟು ಜಗಳ ನಡೆದಿದೆ. ನಂತ್ರ ಆಕೆಗೆ ಮದುವೆಯಾಗಿದ್ದು, ಇವರಿಬ್ಬರ ಸಂಬಂಧ ಮುಂದುವರೆದಿದೆ. ಮದುವೆಯಾದ 6 ತಿಂಗಳ ನಂತ್ರ ಗಂಡನ ಎಲ್ಲ ಪಾಸ್ವರ್ಡ್ ಮಾಜಿ ಪ್ರೇಯಸಿ ಹೆಸರಿನಲ್ಲಿದೆ ಎಂಬುದನ್ನು ತಿಳಿದ ಮಹಿಳೆ ನೊಂದಿದ್ದಾಳೆ. ಆದ್ರೆ ಈಕೆಗೆ ತಜ್ಞರು ಸಲಹೆ ನೀಡಿದ್ದಾರೆ. ಹೊಂದಾಣಿಕೆ ಬಹಳ ಮುಖ್ಯ. ಭಯ, ಆತಂಕದ ಬಗ್ಗೆ ಪತಿ ಬಳಿ ಮುಕ್ತವಾಗಿ ಮಾತನಾಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.