ಮೋಸ ಮಾಡಿದ ಆರೋಪದ ಮೇಲೆ ಮಹಿಳೆ ತನ್ನ ಗಂಡನಿಗೆ 10 ಲಕ್ಷ 28 ಸಾವಿರ ರೂಪಾಯಿ ನೀಡಬೇಕಾಗಿದೆ. ಯುಎಇಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ಮಾಡಿದ ಪತ್ನಿ ವಿರುದ್ಧ ಕೋರ್ಟ್ ಗೆ ಹೋದ ಪತಿ ಜಯ ಸಾಧಿಸಿದ್ದಾನೆ.
ಮೂರು ಮಕ್ಕಳ ತಾಯಿ ವರ್ತನೆ ಕೆಲ ದಿನಗಳಿಂದ ಬದಲಾಗಿತ್ತು. ಇದನ್ನು ಗಮನಿಸಿದ ಪತಿ, ಪತ್ನಿಯನ್ನು ಹಿಂಬಾಲಿಸಿದ್ದಾನೆ. ಪತ್ನಿ ತನ್ನ ಬಾಯ್ ಫ್ರೆಂಡ್ ಜೊತೆ ಸುತ್ತಾಡಿದ್ದು, ಅದ್ರ ಸಾಕ್ಷಿ ಕಲೆ ಹಾಕಿದ್ದಾನೆ. ಇದಾದ್ಮೇಲೆ ಕೋರ್ಟ್ ಮೆಟ್ಟಿಲೇರಿದ್ದಾನೆ. ಕೌಟುಂಬಿಕ ಕೋರ್ಟ್ ಒಪ್ಪಂದ ಮಾಡಿಕೊಳ್ಳುವಂತೆ ಸಲಹೆ ನೀಡಿದೆ. ಆದ್ರೆ ಈ ಸಲಹೆಯನ್ನು ಸ್ವೀಕರಿಸದ ಪತಿ ವಿಚ್ಛೇದನ ನೀಡಿದ್ದಾನೆ. ಮಕ್ಕಳ ಜವಾಬ್ದಾರಿ ಪಡೆದ ಪತಿ, ಪತ್ನಿ ಮಾನಸಿಕ ಹಿಂಸೆ ನೀಡಿದ್ದಾಳೆಂದು ಆರೋಪ ಮಾಡಿದ್ದಾನೆ.
ವಿಚಾರಣೆ ನಡೆಸಿದ ಕೋರ್ಟ್, ಪತ್ನಿಗೆ 10 ಲಕ್ಷ 28 ಸಾವಿರ ರೂಪಾಯಿ ದಂಡ ವಿಧಿಸಿದೆ.