ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ.
ನೇಪಾಳಕ್ಕೆ ಹೋದ್ರೆ ಅಲ್ಲಿನ ರುಚಿ ರುಚಿ ಆಹಾರ ತಿನ್ನದೆ ವಾಪಸ್ ಆಗಬೇಡಿ. ಮಾಂಸಹಾರದ ಜೊತೆ ಸಸ್ಯಹಾರಿಗಳಿಗೂ ಬಗೆ ಬಗೆಯ ರುಚಿ ರುಚಿ ಆಹಾರ ಬಾಯಲ್ಲಿ ನೀರೂರಿಸುತ್ತದೆ.
ಸೇಲ್ ರೋಟಿ: ಇದು ನೇಪಾಳದ ಪ್ರಸಿದ್ಧ ಸ್ಟ್ರೀಟ್ ಆಹಾರ. ನೋಡಲು ಡೋನಟ್ ನಂತೆ ಕಾಣುವ ಈ ಸೇಲ್ ರೋಟಿ ಸಿಹಿಯಾಗಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ನೇಪಾಳದ ಪ್ರತಿಯೊಂದು ಮನೆಯಲ್ಲೂ ಇದನ್ನು ತಯಾರಿಸುತ್ತಾರೆ.
ಚತುಮಾರಿ: ಫಿಜ್ಜಾ ರೀತಿ ಕಾಣುವ ಇದನ್ನು ಅಕ್ಕಿ ಹಿಟ್ಟು, ಒಣಗಿದ ಮಾಂಸ, ಮೊಟ್ಟೆ ಹಾಗೂ ತರಕಾರಿಗಳಿಂದ ತಯಾರಿಸುತ್ತಾರೆ.
ಬಾರಾ: ಇಲ್ಲಿ ಸ್ನ್ಯಾಕ್ಸ್ ಗೆ ಬಾರಾ ಸುಲಭವಾಗಿ ಸಿಗುತ್ತದೆ. ನೋಡಲು ಇದು ಪ್ಯಾನ್ ಕೇಕ್ ರೀತಿಯಲ್ಲಿರುತ್ತದೆ.
ಯೋಮಾರಿ: ಹಬ್ಬದ ಸಂದರ್ಭಗಳಲ್ಲಿ ಇದನ್ನು ತಯಾರಿಸುತ್ತಾರೆ. ಇದನ್ನು ಅಕ್ಕಿ ಹಿಟ್ಟು ಹಾಗೂ ತೆಂಗಿನ ತುರಿಯಿಂದ ಮಾಡಲಾಗುತ್ತದೆ.