ಹಿಂದೆಯೆಲ್ಲಾ ಕೈದಿಗಳನ್ನು ಇಡುತ್ತಿದ್ದ ಕೇಂದ್ರಗಳಲ್ಲಿ ಕೆಂಪು ಬಣ್ಣದ ತ್ರಿಕೋನವನ್ನು ನಾಜಿಗಳು ಬಳಕೆ ಮಾಡುತ್ತಿದ್ದರು. ಇದನ್ನು ಬಳಸುತ್ತಿದ್ದ ಉದ್ದೇಶ ಅಂದರೆ ರಾಜಕೀಯ ಕೈದಿಗಳು, ಕಮ್ಯುನಿಸ್ಟ್ ಹಾಗೂ ಇತರರನ್ನು ಗುರುತಿಸುವುದಕ್ಕೆ. ಇದೀಗ ಕೆಂಪು ಬಣ್ಣದ ತ್ರಿಕೋನದ ಬಳಕೆ ಟ್ರಂಪ್ ಆಡ್ ಒಂದರಲ್ಲಿ ಆಗಿದೆ.
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಹೀರಾತಿನಲ್ಲಿ ಆಂಟಿ ಫ್ಯಾಸಿಸಂ ಆಂದೋಲನದ ಸಂಕೇತವಾಗಿ ಬಳಸುತ್ತಿದ್ದ ಕೆಂಪು ಬಣ್ಣದ ತ್ರಿಕೋನವನ್ನು ಬಳಕೆ ಮಾಡಲಾಗಿತ್ತು. ಆದರೆ ಇದೀಗ ಈ ಆಡ್ನ ಡಿಲೀಟ್ ಮಾಡಲಾಗಿದೆ. ಇದಕ್ಕೆ ಸ್ಪಷ್ಟ ಕಾರಣವನ್ನೂ ಫೇಸ್ಬುಕ್ ನೀಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಫೇಸ್ ಬುಕ್ನ ಭದ್ರತಾ ಪಾಲಿಸಿ ಮುಖ್ಯಸ್ಥ ನಥಾನಿಯಲ್ ಗ್ಲೇಷರ್, ಟ್ರಂಪ್ ಅವರ ಜಾಹೀರಾತು ತೆಗೆದು ಹಾಕಲು ಕಾರಣವಿದೆ. ಅವರ ಈ ಜಾಹೀರಾತು ಫೇಸ್ಬುಕ್ ನಿಯಮ ಉಲ್ಲಂಘನೆ ಮಾಡುತ್ತದೆ. ಹಾಗಾಗಿ ತೆಗೆದು ಹಾಕಿದ್ದೇವೆ ಎಂದು ಹೇಳಿದ್ದಾರೆ.