ನಾಗಾಲ್ಯಾಂಡ್ ಸರ್ಕಾರ ನಾಯಿ ಹಾಗೂ ನಾಯಿ ಮಾಂಸದ ಮಾರಾಟವನ್ನು ರದ್ದು ಮಾಡಲಾಗಿದೆ. ನಾಯಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬಂದಿತ್ತು. ಶುಕ್ರವಾರ ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಿದೆ.
ನಾಗಾಲ್ಯಾಂಡ್ ಸರ್ಕಾರ ನಾಯಿಗಳ ಕಚ್ಚಾ ಮಾಂಸ ಹಾಗೂ ಬೇಯಿಸಿದ ಮಾಂಸ ಮಾರಾಟವನ್ನು ನಿಷೇಧಿಸಿದೆ ಎಂದು ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಇದಲ್ಲದೆ ನಾಯಿ ಮಾರುಕಟ್ಟೆಯನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ನಾಯಿಗಳ ಕಳ್ಳಸಾಗಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.
ನಾಯಿ ಮಾಂಸ ಮಾರುಕಟ್ಟೆಯು ನಾಗಾಲ್ಯಾಂಡ್ ಜೊತೆಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೂ ವ್ಯಾಪಿಸಿದೆ. ಅಸ್ಸಾಂನಲ್ಲಿ 50 ರೂಪಾಯಿಗೆ ನಾಯಿ ಖರೀದಿಸಿ ನಾಗಾಲ್ಯಾಂಡ್‌ನಲ್ಲಿ ಮಾಂಸವನ್ನು 1000 ರೂಪಾಯಿವರೆಗೆ ಮಾರಾಟ ಮಾಡಲಾಗ್ತಿದೆ.