ಕೊರೊನಾ ಮಧ್ಯೆಯೇ ಅನೇಕ ದೇಶಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗ್ತಿದೆ. ವಿದೇಶಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಈ ಮಧ್ಯೆ ಥಾಯ್ಲೆಂಡ್ ಮಹತ್ವದ ಘೋಷಣೆ ಮಾಡಿದೆ. ಥಾಯ್ಲೆಂಡ್ ಪ್ರವಾಸಕ್ಕೆ ಹೋಗುವವರು 30 ದಿನಗಳ ಕಾಲ ಅಲ್ಲಿ ತಂಗುವುದು ಕಡ್ಡಾಯವಾಗಿದೆ.
ಥಾಯ್ಲೆಂಡ್ ಗೆ ಬರುವ ಪ್ರವಾಸಿಗರು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು. ತಂಗುವ ಹೊಟೇಲ್ ನಿಂದ ಹೊರಗೆ ಬರುವಂತಿಲ್ಲ. ನಂತ್ರ ಎಲ್ಲಿ ಬೇಕಾದ್ರೂ ಓಡಾಡಬಹುದು ಎಂದು ಥಾಯ್ಲೆಂಡ್ ಸರ್ಕಾರ ಹೇಳಿದೆ.
ಹೊಸ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಪ್ರವಾಸಿಗರು ಕ್ವಾರಂಟೈನ್ ಅವಧಿಯಲ್ಲಿ ಎರಡು ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕೊರೊನಾ ನಿಯಂತ್ರಣದಲ್ಲಿ ಥಾಯ್ಲೆಂಡ್ ಮೇಲುಗೈ ಸಾಧಿಸಿದೆ. ಮೂರು ತಿಂಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.