ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಭಾರತ – ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲೂ ಸಾವು-ನೋವು ಸಂಭವಿಸಿದ್ದು, ಆದರೆ ಈ ಕುರಿತು ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ಇರಲಿಲ್ಲ.
ಆದರೆ ಭಾರತೀಯ ಸೇನೆ, ಚೀನಾದ 45 ಮಂದಿ ಬಲಿಯಾಗಿದ್ದಾರೆ ಎಂಬ ವಿಷಯವನ್ನು ಖಚಿತಪಡಿಸಿದ್ದು, ಇದೀಗ ಇದೇ ಮೊದಲ ಬಾರಿಗೆ ಚೀನಾ ತನ್ನ ಸೈನಿಕರ ಸಾವನ್ನು ಒಪ್ಪಿಕೊಂಡಿದೆ. ಭಾರತ ಮತ್ತು ಚೀನಾ ನಡುವೆ ಸೋಮವಾರ ನಡೆದ ಸಂಧಾನ ಮಾತುಕತೆ ವೇಳೆ ಚೀನಾ ಈ ವಿಷಯವನ್ನು ಬಹಿರಂಗಪಡಿಸಿದೆ.
ಆದರೆ ತನ್ನ ಕಡೆಯ ಎಷ್ಟು ಮಂದಿ ಸೈನಿಕರು ಬಲಿಯಾಗಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಡದ ಚೀನಾ, ಇದನ್ನು ಬಹಿರಂಗಪಡಿಸುವುದರಿಂದ ಭಾರತ ಮುಜುಗರ ಮತ್ತು ಒತ್ತಡಕ್ಕೆ ಗುರಿಯಾಗುತ್ತದೆ. ಸಂಧಾನ ಮಾತುಕತೆಗೆ ಇದು ಅಡ್ಡಿಯಾಗಬಹುದು. ನಮಗೆ ಶಾಂತಿಯೇ ಮುಖ್ಯ ಎಂಬ ಕುಂಟು ನೆಪವನ್ನು ಹೇಳಿದೆ.