ವಿಶ್ವದಾದ್ಯಂತ ಟೀಕೆಗೆ ಗುರಿಯಾದ್ರೂ ಕೊರೊನಾ ಲಸಿಕೆ ಹೊರಗೆ ತಂದ ರಷ್ಯಾ ಈಗ ಚೀನಾ ಲಸಿಕೆ ಪ್ರಯೋಗ ಶುರು ಮಾಡಿದೆ. ಚೀನಾದ ಕೊರೊನಾ ಲಸಿಕೆ ಕ್ಯಾನ್ಸಿನೊದ ಮೂರನೇ ಹಂತದ ಪ್ರಯೋಗ ರಷ್ಯಾದಲ್ಲಿ ನಡೆಯುತ್ತಿದೆ.
ರಷ್ಯಾದ ಸರ್ಕಾರದ ದಾಖಲೆಯ ಪ್ರಕಾರ 625 ಸ್ವಯಂಸೇವಕರನ್ನು ಚೀನಾದ ಲಸಿಕೆಯ ಹಂತ -3 ಪ್ರಯೋಗದಲ್ಲಿ ಬಳಸಿಕೊಳ್ಳಲಾಗಿದೆ. ಪರೀಕ್ಷೆ ಶುಕ್ರವಾರದಿಂದ ಶುರುವಾಗಿದೆ. ರಷ್ಯಾದ ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕ್ಯಾಸಿನೊ ಕಂಪನಿ ನಿರಾಕರಿಸಿದೆ.
ಮೆಕ್ಸಿಕೊ, ಸೌದಿ ಅರೇಬಿಯಾ, ಬ್ರೆಜಿಲ್ ಮತ್ತು ಚಿಲಿಯಲ್ಲಿ ಮೂರನೇ ಹಂತದ ಪ್ರಯೋಗಗಳನ್ನು ಪ್ರಾರಂಭಿಸುವ ಯೋಜನೆಯನ್ನು ಕ್ಯಾಸಿನೋ ಹೊಂದಿದೆ. ಕೊರೊನಾ ಲಸಿಕೆ ತಯಾರಿಸಲು ಕ್ಯಾಸಿನೊಗೆ ಚೀನಾ ಸರ್ಕಾರ ಒಪ್ಪಿಗೆ ನೀಡಿದೆ. ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿರುವುದು ಪರೀಕ್ಷೆಗೆ ತೊಂದರೆಯಾಗಿದೆ.