:format(jpeg)/cdn.vox-cdn.com/uploads/chorus_image/image/53585941/Tinder-app-stock-Dec2015-verge-02_.0.0.jpg)
ಭಾರತದಲ್ಲಿ 118 ವಿದೇಶಿ ಅಪ್ಲಿಕೇಷನ್ ಮೇಲೆ ನಿಷೇಧ ಹೇರಲಾಗಿದೆ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಡೇಟಿಂಗ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರಲಾಗಿದೆ. ಟಿಂಡರ್ ಅಪ್ಲಿಕೇಷನ್ ಸೇರಿದಂತೆ ಐದು ಡೇಟಿಂಗ್ ಅಪ್ಲಿಕೇಷನ್ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದೆ.
ಸ್ಥಳೀಯ ಕಾನೂನುಗಳನ್ನು ಈ ಅಪ್ಲಿಕೇಷನ್ ಗಳು ಪಾಲಿಸುತ್ತಿರಲಿಲ್ಲವೆಂದು ಪಾಕ್ ಹೇಳಿದೆ. ಆನ್ಲೈನ್ ಪ್ಲಾಟ್ ಫಾರ್ಮನ್ನು ಅನೈತಿಕವೆಂದು ಹೇಳಿದ ಪಾಕಿಸ್ತಾನ ಈ ಅಪ್ಲಿಕೇಷನ್ ಗಳನ್ನು ನಿಷೇಧ ಮಾಡಿದೆ.
ಇಂಡೋನೇಷ್ಯಾದ ನಂತರ ಪಾಕಿಸ್ತಾನ ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ದೇಶವಾಗಿದೆ. ಈ ಇಸ್ಲಾಮಿಕ್ ದೇಶದಲ್ಲಿ ವಿವಾಹೇತರ ಸಂಬಂಧಗಳು ಮತ್ತು ಸಲಿಂಗಕಾಮವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಇದನ್ನು ಅಪರಾಧವೆಂದು ಪರಿಗಣಿಸಲಾಗಿದ್ದು, ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಐದು ಅಪ್ಲಿಕೇಶನ್ ಕಂಪನಿಗಳಿಗೆ ನೋಟಿಸ್ ಕಳುಹಿಸಿದ್ದೇವೆ. ಈ ಅಪ್ಲಿಕೇಶನ್‌ಗಳಲ್ಲಿ ಅನೈತಿಕ ಮತ್ತು ಅಶ್ಲೀಲ ವಿಷಯವನ್ನು ಪ್ರಸಾರ ಮಾಡಲಾಗುತ್ತಿರುವುದರಿಂದ ಅವುಗಳನ್ನು ಕಳುಹಿಸಲಾಗುತ್ತಿದೆ ಎಂದು ಪಾಕಿಸ್ತಾನ ಟೆಲಿಕಾಂ ಪ್ರಾಧಿಕಾರ ಹೇಳಿದೆ.
ಟಿಂಡರ್, ಗ್ರೈಂಡರ್, ಟ್ಯಾಗ್ಡ್, ಸ್ಕೌಟ್ ಮತ್ತು ಸೆಹೆಗೆ ಡೇಟಿಂಗ್ ಸೇವೆಗಳನ್ನು ರದ್ದು ಮಾಡಲಾಗಿದೆ. ಟಿಂಡರ್ ವಿಶ್ವದ ಪ್ರಮುಖ ಡೇಟಿಂಗ್ ಅಪ್ಲಿಕೇಶನ್ ಆಗಿದೆ. ಇದು ಮ್ಯಾಚ್ ಗ್ರೂಪ್ ಒಡೆತನದಲ್ಲಿದೆ. ಪಾಕಿಸ್ತಾನದಲ್ಲಿ ಕಳೆದ 12 ತಿಂಗಳಲ್ಲಿ ಟಿಂಡರ್ ಅನ್ನು 4,40,000 ಬಾರಿ ಡೌನ್‌ಲೋಡ್ ಮಾಡಲಾಗಿದೆ.