ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೆಲ ದೇಸಿ ಅಪ್ಲಿಕೇಷನ್ ಗಳ ಬಗ್ಗೆ ಹೇಳಿದ್ದರು. ಈ ಅಪ್ಲಿಕೇಷನ್ ಗಳು ಈಗ ಡೌನ್ಲೋಡ್ ಆದ ಟಾಪ್ 10 ಅಪ್ಲಿಕೇಷನ್ ಪಟ್ಟಿಯಲ್ಲಿ ಸೇರಿವೆ.
ಅಪ್ಲಿಕೇಷನ್ ನ ಸಾಮಾಜಿಕ ವಿಭಾಗಗಳಲ್ಲಿ ಸ್ನ್ಯಾಪ್ಚಾಟ್, ಶೇರ್ಚಾಟ್ ಮೊಜ್, ರೊಪೊಸೊ ಮತ್ತು ಸ್ಪಾರ್ಕ್ ಸೇರಿವೆ. ಶಿಕ್ಷಣ ವಿಭಾಗದಲ್ಲಿ ಎಪಿ ಸರ್ಕಾರ್ ಸೇವಾ, ದೃಷ್ಟಿ, ಸರಡಾಟಾ, ವೂಟ್ಕಿಡ್ಸ್, ಪಂಜಾಬ್ ಎಡಿಕೇರ್, ಡೌಟ್ನಟ್, ಕುಟುಕಿ ಕಿಡ್ಸ್ ಸೇರಿದೆ.
ಆರೋಗ್ಯ ಮತ್ತು ಫಿಟ್ನೆಸ್ ವಿಭಾಗದಲ್ಲಿ ಆರೋಗ್ಯಾ ಸೇತು ಅಗ್ರಸ್ಥಾನದಲ್ಲಿದ್ದರೆ, ಸ್ಟೆಪ್ ಜಿಪಿ, ಹೋಮ್ ವರ್ಕೌಟ್, ಲಾಸ್ ವೇಟ್ ಆ್ಯಪ್, ಇನ್ ಕ್ರೀಸ್ ಹೈ ವರ್ಕೌಟ್, ಸಿಕ್ಸ್ ಪ್ಯಾಕ್ ಇದ್ರಲ್ಲಿ ಸೇರಿದೆ. ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ದೇಶಿ ಅಪ್ಲಿಕೇಷನ್ ಬಗ್ಗೆ ಉಲ್ಲೇಖಿಸಿದ್ದರು.