ಭಾರತದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಏಷ್ಯಾ ರಾಷ್ಟ್ರ ಎರಡನೇ ಹಂತದ ಲಾಕ್ ಡೌನ್ ಗೆ ತಯಾರಿ ನಡೆಸಿದೆ. ಜುಲೈ 10ರಿಂದ ಆಗಸ್ಟ್ 1 ರ ನಡುವೆ ಉಜ್ಬೇಕಿಸ್ತಾನ್ ಎರಡನೇ ಹಂತದ ಲಾಕ್‌ಡೌನ್ ಘೋಷಿಸಲಿದೆ.
ಅಲ್ಲಿನ ಮಾಧ್ಯಮಗಳ ಪ್ರಕಾರ, ಉಜ್ಬೇಕಿಸ್ತಾನದಲ್ಲಿ ಈವರೆಗೆ 10,838 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ 41 ಸಾವು ಸಂಭವಿಸಿವೆ. ಇಲ್ಲಿ 6811 ಜನರು ಗುಣಮುಖರಾಗಿದ್ದಾರೆ. 3986 ಸಕ್ರಿಯ ಪ್ರಕರಣವಿದೆ. ವಿಶ್ವದಲ್ಲಿ ಸದ್ಯ ಕೊರೊನಾ ಅಬ್ಬರ ಹೆಚ್ಚಿದೆ. ಅದ್ರ ನಿಯಂತ್ರಣಕ್ಕೆ ಉಜ್ಜೇಕಿಸ್ತಾನ ಸರ್ಕಾರ ಲಾಕ್ ಡೌನ್ ಅನಿವಾರ್ಯ ಎನ್ನುತ್ತಿದೆ.
ವಿಶ್ವದಲ್ಲಿ ಒಟ್ಟು 11,954,942 ಪ್ರಕರಣಗಳಿವೆ. ಸೋಂಕಿನಿಂದ 546,720 ಜನರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆಯೂ 6,902,358 ಕ್ಕೆ ತಲುಪಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಅಮೆರಿಕಾವನ್ನು ಕಾಡ್ತಿದೆ.