ತನ್ನ ಹುಚ್ಚು ನಿರ್ಧಾರಗಳ ಮೂಲಕವೇ ಹೆಸರರಾದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ತನ್ನ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಷ್ಟೆ ಅಲ್ಲ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಸರ್ವಾಧಿಕಾರಿಗೆ ಕಣ್ಣೀರು ಹಾಕುವ ಪ್ರಸಂಗ ಏನಾಯ್ತು ಎಂಬ ಪ್ರಶ್ನೆ ಮೂಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಹೌದು, ಕೊರೊನಾ ಸಂಕಷ್ಟದ ಸಮಯದಲ್ಲಿ ಆಯಾಯ ರಾಜ್ಯದ ಸಿಎಂಗಳು ಆಯಾಯ ದೇಶದ ಪಿಎಂಗಳು ಜನರ ಬೆನ್ನಿಗೆ ನಿಂತರು. ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ನಾನು ನನ್ನ ಪ್ರಜೆಗಳ ಬಳಿ ಇದ್ದು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಕಿಮ್ ಜಾಂಗ್ ಉನ್ ದೇಶದ ಜನರ ಬಳಿ ಕ್ಷಮೆ ಯಾಚಿಸಿದ್ದಾರೆ.
ತಮ್ಮ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ 75ನೇ ಸಂಸ್ಥಾಪನಾ ದಿನದಲ್ಲಿ ದೇಶದ ಜನರ ಮುಂದೆ ಕ್ಷಮೆ ಯಾಚಿಸಿ ಕಣ್ಣೀರು ಹಾಕಿದ್ದಾರೆ. ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ನಾನು ಇರಬೇಕಿತ್ತು. ದೇಶದ ಜನರ ನಂಬಿಕೆ ಉಳಿಸಿಕೊಂಡಿಲ್ಲ. ಇಂತಹ ಸಮಯದಲ್ಲಿ ಜನ ಸೇವೆ ಮಾಡಬೇಕಿತ್ತು. ಆದರೆ ಅದು ಆಗಲಿಲ್ಲ ಎಂದು ಭಾವುಕರಾಗಿದ್ದಾರೆ.