ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ನಿಧಾನವಾಗಿ ಇಳಿಯುತ್ತಿದೆ. ಆದ್ರೆ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಮುಂದಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ ಕೊರೊನಾ ಲಸಿಕೆ ನಿರೀಕ್ಷೆಯಲ್ಲಿ ಭಾರತವಿದೆ. ಈ ಮಧ್ಯೆ ಚೀನಾ ಕೊರೊನಾ ಲಸಿಕೆ ಹಂಚಿಕೆ ಶುರು ಮಾಡಿದೆ ಎನ್ನಲಾಗ್ತಿದೆ.
ಚೀನಾದಲ್ಲಿ ಒಂದು ಕಡೆ ಕೊರೊನಾ ಲಸಿಕೆ ಪ್ರಯೋಗ ನಡೆಯುತ್ತಿದೆ. ಇನ್ನೊಂದು ಕಡೆ ಜನರನ್ನು ಅಪಾಯಕ್ಕೆ ತಳ್ಳಲಾಗ್ತಿದೆ. ಜನರಿಗೆ ಪರೀಕ್ಷೆ ಫಲಿತಾಂಶ ಬರುವ ಮೊದಲೇ ಕೊರೊನಾ ಲಸಿಕೆ ನೀಡಲಾಗ್ತಿದೆ. ತುರ್ತು ರೋಗ ನಿರೋಧಕ ಕಾರ್ಯಕ್ರಮದಡಿ ಲಸಿಕೆ ಬೆಲೆಯನ್ನು 4400 ರೂಪಾಯಿ ನಿಗದಿಪಡಿಸಲಾಗಿದೆ.
ಬೀಜಿಂಗ್ ಮೂಲದ ಸಿನೊವಾಕ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೊರೊನಾವಾಕ್ ಎಂಬ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು, ಸಾಂಕ್ರಾಮಿಕ ತಡೆಗಟ್ಟುವಿಕೆಯಲ್ಲಿ ತೊಡಗಿರುವ ಜನರು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಜನರಿಗೆ ನೀಡಲಾಗ್ತಿದೆ. ಪರೀಕ್ಷೆ ನಡೆಸದೆ ಚೀನಾ ಲಸಿಕೆ ನೀಡ್ತಿದ್ದು, ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನಲಾಗ್ತಿದೆ.