ವಿಶ್ವದಾದ್ಯಂತ ಕೊರೊನಾ ಸೋಂಕು ತನ್ನ ವೇಗ ಹೆಚ್ಚಿಸಿದೆ. ಚಿಲಿಯಲ್ಲಿ 24 ಗಂಟೆಯಲ್ಲಿ 2,616 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇದ್ರ ನಂತ್ರ ದೇಶದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 3,17,657 ಕ್ಕೆ ಏರಿದೆ.
ಚಿಲಿಯಲ್ಲಿ ಕೊರೊನಾಕ್ಕೆ ಕಳೆದ 24 ಗಂಟೆಯಲ್ಲಿ 45 ರೋಗಿಗಳು ಸಾವನ್ನಪ್ಪಿದ್ದಾರೆ. ಒಟ್ಟೂ ಸತ್ತವರ ಸಂಖ್ಯೆ 7,024 ಏರಿದೆ. ಪ್ರಸ್ತುತ ದೇಶದಲ್ಲಿ 1,931 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಇಂಗ್ಲೆಂಡ್ ನಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಇಂಗ್ಲೆಂಡ್ ನ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಧರಿಸದ ವ್ಯಕ್ತಿಗೆ 125 ಡಾಲರ್ ದಂಡ ವಿಧಿಸಲಾಗುವುದು. ಹೊಸ ಆದೇಶ ಜುಲೈ15ರಿಂದಲೇ ಜಾರಿಗೆ ಬರಲಿದೆ.