100 ವರ್ಷಗಳಷ್ಟು ಹಳೆಯದಾದ ತಮ್ಮ ಮನೆಯ ಗೋಡೆಗಳನ್ನು ಉರುಳಿಸಲು ಹೊರಟಿದ್ದ ದಂಪತಿಗಳಿಗೆ ಭಾರೀ ’ಕಿಕ್’ ಕೊಡುವ ಅಚ್ಚರಿಯೊಂದು ಕಾದಿತ್ತು.
ನ್ಯೂಯಾರ್ಕ್‌ನ ನಿಕ್ ಡ್ರಮ್ಮಂಡ್ ಹಾಗೂ ಪ್ಯಾಟ್ರಿಕ್ ಬಾಕ್ಕೆರ್ ದಂಪತಿಗಳು ಇಲ್ಲಿನ ಆಮ್ಸ್ ಪ್ರದೇಶದಲ್ಲಿರುವ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಈ ಮನೆಯನ್ನು ಕಳ್ಳಸಾಗಾಟದ ದಂಧೆಯಲ್ಲಿ ಇದ್ದ ವ್ಯಕ್ತಿಯೊಬ್ಬ ಕಟ್ಟಿಸಿರುವುದು ಎಂದು ತಿಳಿದೂ ಸಹ ಖರೀದಿ ಮಾಡಿದ್ದರು ದಂಪತಿ.
ಮನೆಯ ಹೊರಾಂಗಣದ ಸ್ಕರ್ಟಿಂಗ್ ಅನ್ನು ತೆಗೆಯುವ ವೇಳೆ 66 ಬಾಟಲಿಗಳಷ್ಟು ಮದ್ಯ ಸಿಕ್ಕಿದೆ ಎಂದು ಡ್ರಮ್ಮಂಡ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮದ್ಯಪಾನ ನಿಷೇಧಿತ ಪ್ರದೇಶದಲ್ಲಿರುವ ಈ ಮನೆಯನ್ನು 1915ರಲ್ಲಿ ಕಟ್ಟಿಸಲಾಗಿದೆ.