ಸದ್ಯ ಗಾಂಜಾದ ಸುದ್ದಿ ಚರ್ಚೆಯಲ್ಲಿದೆ. ಗಾಂಜಾ ಒಂದು ನಶೆ ಪದಾರ್ಥ. ನಿಯಮಿತವಾಗಿ ಅದನ್ನು ಸೇವಿಸಿ ಅನೇಕರು ಗಾಂಜಾ ದಾಸರಾಗಿದ್ದಾರೆ. ಗಾಂಜಾ ಬಗ್ಗೆ ಈಗ ಬಂದ ಸುದ್ದಿಯೊಂದು ದಂಗಾಗಿಸುವಂತಿದೆ. ಕೆನಡಾದ ಕೊಲಿನ್ ಸುಲಿವಾನ್ ಎಂಬಾತ ಗಾಂಜಾ ಬಗ್ಗೆ ಆಘಾತಕಾರಿ ವಿಷ್ಯ ಹೇಳಿದ್ದಾನೆ.
ಆತನ ಮನೆ ತೋಟದಲ್ಲಿ ಬೆಳೆದಿದ್ದ ಗಾಂಜಾ ಕಾಣೆಯಾಗ್ತಿತ್ತಂತೆ. ಅನೇಕ ದಿನಗಳಿಂದ ತಲೆ ಕೆಡಿಸಿಕೊಂಡಿದ್ದ ಕೊಲಿನ್ ಎರಡು ದಿನ ಗಾರ್ಡನ್ ಮೇಲೆ ಗಮನ ಹರಿಸಿದ್ದನಂತೆ. ಆಗ ಗಾಂಜಾ ತಿನ್ನುತ್ತಿರುವುದು ಮತ್ತ್ಯಾರೂ ಅಲ್ಲ ಇಲಿ ಎಂಬುದು ಗೊತ್ತಾಗಿದೆ.
ಪ್ರತಿ ದಿನ ಅಲ್ಲಿಗೆ ಬರ್ತಿದ್ದ ಇಲಿ ಗಾಂಜಾ ತಿನ್ನುತ್ತಿತ್ತಂತೆ. ಪ್ರಜ್ಞೆತಪ್ಪಿ ಬೀಳುವವರೆಗೂ ಇಲಿ ಗಾಂಜಾ ತಿನ್ನುತ್ತಿತ್ತಂತೆ. ಇದನ್ನು ಕೊಲಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಜೊತೆಗೆ ಇಲಿಯನ್ನು ಕಾಡಿಗೆ ಬಿಟ್ಟು ಬಂದಿರುವುದಾಗಿ ಹೇಳಿದ್ದಾನೆ.