ಅಮೆರಿಕಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳು ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಭ್ರೂಣ ತೆಗೆದಿದ್ದಾಳೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.27 ವರ್ಷದ ಟೇಲರ್ ಪಾರ್ಕರ್ ಈಗ ಜೈಲು ಕಂಬಿ ಎಣಿಸುತ್ತಿದ್ದಾಳೆ. ಆಕೆ ಜಾಮೀನಿಗೆ 37 ಕೋಟಿ ಬಾಂಡ್ ನೀಡುವಂತೆ ಕೋರ್ಟ್ ಸೂಚಿಸಿದೆ.
ಪೊಲೀಸ್ ಮುಂದೆ ಬಂದಿದ್ದ ಟೇಲರ್, ಈಗಷ್ಟೇ ಮಗುವಿಗೆ ಜನ್ಮ ನೀಡಿದ್ದೇನೆ. ಆದರೆ ಮಗು ಉಸಿರಾಡುತ್ತಿಲ್ಲ ಎಂದಿದ್ದಾಳೆ. ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿಸುವುದು ಗೊತ್ತಾಗಿದೆ. ಅದೇ ದಿನ ಟೆಕ್ಸಾಸ್ ನಗರದಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಆಕೆ ಗರ್ಭದಲ್ಲಿದ್ದ ಮಗು ನಾಪತ್ತೆಯಾಗಿತ್ತು. ಮಹಿಳೆ ಶವ 20 ಕಿಲೋಮೀಟರ್ ದೂರದಲ್ಲಿ ಸಿಕ್ಕಿತ್ತು. ವಿಚಾರಣೆ ವೇಳೆ ಪಾರ್ಕರ್ ಮಹಿಳೆ ಹತ್ಯೆ ಮಾಡಿದ್ದಾಳೆಂಬುದು ಗೊತ್ತಾಗಿದೆ.
ಮೃತ ರೇಗನ್ ಹಾಗೂ ಪಾರ್ಕರ್ ಸ್ನೇಹಿತೆಯರಂತೆ. ಫೇಸ್ಬುಕ್ ಮೂಲಕ ಸ್ನೇಹ ಶುರುವಾಗಿತ್ತಂತೆ. ಒಂದು ವರ್ಷದ ಹಿಂದೆ ಇಬ್ಬರೂ ಭೇಟಿಯಾಗಿದ್ದರಂತೆ. ಕೊಲೆಯ ಹಿಂದಿನ ದಿನ ಪಾರ್ಕರ್, ರೇಗನ್ ಗೆ ಗಿಫ್ಟ್ ಕೂಡ ನೀಡಿದ್ದಳಂತೆ. ಆದ್ರೆ ಪಾರ್ಕರ್ ಏಕೆ ಹತ್ಯೆ ಮಾಡಿದ್ದಾಳೆ ಎಂಬುದು ಗೊತ್ತಿಲ್ಲವೆಂದು ರೇಗನ್ ತಾಯಿ ಹೇಳಿದ್ದಾಳೆ.