ಕೊರೊನಾ ವೈರಸ್ ವಿಶ್ವದಾದ್ಯಂತ ಆವರಿಸಿದೆ. ಈ ವೈರಸ್ ನಿಂದ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕದ ಜನರ ಸಾವಿನ ಅಪಾಯ ಮೂರು ಪಟ್ಟು ಹೆಚ್ಚಾಗಿದೆ ಎಂಬುದು ಗೊತ್ತಾಗಿದೆ. ಯುಕೆ ಸರ್ಕಾರಿ ಸಂಸ್ಥೆ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಅಧಿಕ ತೂಕ ಹೊಂದಿರುವ ಜನರು ಕೊರೊನಾದಿಂದ ಅನಾರೋಗ್ಯಕ್ಕೆ ಒಳಗಾದಾಗ ವೆಂಟಿಲೇಟರ್‌ನ ಅಗತ್ಯವು 7 ಪಟ್ಟು ಹೆಚ್ಚಾಗುತ್ತದೆ. ಬಾಡಿ ಮಾಸ್ ಇಂಡೆಕ್ಸ್ 25 ಕ್ಕಿಂತ ಹೆಚ್ಚಿದ್ದರೆ, ವ್ಯಕ್ತಿಯು ಅಧಿಕ ತೂಕ ಹೊಂದಿದ್ದಾನೆ ಎಂದು ನಂಬಲಾಗಿದೆ. ಅಂತಹ ಜನರಿಗೆ ವೆಂಟಿಲೇಟರ್‌ಗಳ ಅಗತ್ಯವೂ ಹೆಚ್ಚಾಗಬಹುದು. ಆದರೆ ಬಾಡಿ ಮಾಸ್ ಇಂಡೆಕ್ಸ್ 30 ರಿಂದ 35 ಆಗಿದ್ದಾಗ, ಕೊರೊನಾದಿಂದ ಸಾವಿನ ಅಪಾಯವು ಶೇಕಡಾ 40 ರಷ್ಟು ಹೆಚ್ಚಾಗುತ್ತದೆ ಎಂಬುದು ಬಹಿರಂಗವಾಗಿದೆ.
ವರದಿಯ ಪ್ರಕಾರ, ಬಾಡಿ ಮಾಸ್ ಇಂಡೆಕ್ಸ್ 25 ಕ್ಕಿಂತ ಹೆಚ್ಚಿದ್ದರೆ, ಕೊರೊನಾದಿಂದ ಗಂಭೀರ ಕಾಯಿಲೆಯ ಅಪಾಯವು ದ್ವಿಗುಣಗೊಳ್ಳುತ್ತದೆ. ಸಾವಿನ ಅಪಾಯವು 3 ಪಟ್ಟು ಹೆಚ್ಚಾಗುತ್ತದೆ. ಹಾಗಂತ ಅಧಿಕ ತೂಕದ ವ್ಯಕ್ತಿಗೆ ಬೇಗ ಕೊರೊನಾ ಬರುತ್ತೆ ಎಂದಲ್ಲ. ಒಬ್ಬ ವ್ಯಕ್ತಿಯು ತನ್ನ ತೂಕವನ್ನು ಹೆಚ್ಚು ಕಡಿಮೆಗೊಳಿಸಿದರೆ, ಕೊರೊನಾದ ಅಪಾಯವು ಅಷ್ಠೆ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಬೊಜ್ಜು ಉಸಿರಾಟ ಸಮಸ್ಯೆಗೆ ಕಾರಣವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಯುಕೆಯಲ್ಲಿ 45,700 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚಿನವರ ಸಾವಿಗೆ ಬೊಜ್ಜು ಒಂದು ಕಾರಣ ಎನ್ನಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿರುವ ಜನರು ಹೆಚ್ಚು ತಿಂದು, ವ್ಯಾಯಾಮ ಮಾಡದೆ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.