ಇತ್ತೀಚೆಗಷ್ಟೆ ಉತ್ತರ ಕೊರಿಯ ಅಧ್ಯಕ್ಷರ ಆರೋಗ್ಯದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಮತ್ತೆ ಇದೇ ವಿಚಾರವಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸುದ್ದಿಯಾಗಿದ್ದಾರೆ. ಇವರು ಕೋಮಾಗೆ ಜಾರಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ.
ಹೌದು, ಉತ್ತರ ಕೊರಿಯಾ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿಯಾಗಿದ್ದ ಚಾಂಗ್ ಸಾಂಗ್ ಮಿನ್ ಹೇಳಿರುವಂತೆ, ಕಿಮ್ ಜಾಂಗ್ ಉನ್ ಅವರು ಕೋಮಾಗೆ ಜಾರಿದ್ದಾರೆ. ಅಧಿಕಾರವನ್ನು ಅವರ ಸಹೋದರಿ ಕಿಮ್ ಯೊ ಜಾಂಗ್ ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕಿಮ್ ಜಾಂಗ್ ಉನ್ ಅವರ ಆರೋಗ್ಯದ ಕುರಿತು ಬಂದಿರುವ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಏಕೆಂದರೆ ಕಳೆದ ಬಾರಿಯೂ ಇದೇ ರೀತಿಯ ಸುದ್ದಿ ಹರಿದಾಡಿತ್ತು. ಆದರೆ ಏಕಾಏಕಿ ಕಿಮ್ ಎಲ್ಲರ ಮುಂದೆ ಬಂದು ಶಾಕ್ ನೀಡಿದ್ದರು.