ಕೊರೊನಾದಿಂದ ಜನ ಬೇಸತ್ತು ಹೋಗಿದ್ದಾರೆ. ಲಕ್ಷಾಂತರ ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಕೋಟ್ಯಾಂತರ ಜನ ಕೊರೊನಾದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ಸೋಂಕು ಹರಡುವಿಕೆ ಮಾತ್ರ ನಿಂತಿಲ್ಲ.
ಸೋಂಕು ಬಂದಿದ್ದು ಎಲ್ಲಿಂದ ಎಂಬ ಸತ್ಯ ಇಡೀ ಪ್ರಪಂಚಕ್ಕೇ ಗೊತ್ತಿದೆ. ಚೀನಾದ ವುಹಾನ್‌ನಿಂದಲೇ ಬಂದಿದ್ದು ಎಂಬುದು ಎಲ್ಲರಿಗೂ ತಿಳಿಸಿದೆ. ಈ ವೈರಸ್ ಮಾನವ ಸೃಷ್ಟಿ, ವುಹಾನ್ ಲ್ಯಾಬ್‌ನಿಂದಲೇ ಬಂದಿದ್ದು, ಎಂಬ ಆರೋಪವನ್ನು ಚೀನಾ ತಳ್ಳಿ ಹಾಕುತ್ತಲೇ ಇದೆ. ಇದರ ಮಧ್ಯೆ ಚೀನಾ ಮತ್ತೊಂದು ವರಸೆ ತೆಗೆದಿದೆ. ಕೊರೊನಾ ವೈರಸ್ ಕಳೆದ ವರ್ಷವೇ ವಿಶ್ವದ ಹಲವು ದೇಶಗಳಲ್ಲಿ ಕಂಡು ಬಂದಿದೆ ಎನ್ನುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದೆ.
ಹೌದು, ಈ ವೈರಸ್ ಹಿಂದಿನ ವರ್ಷವೇ ಇತ್ತು. ಆದರೆ ನಾವು ಅದನ್ನು ಪ್ರಪಂಚಕ್ಕೆ ತಿಳಿಸಿದ್ದೇವೆ. ಬೇರೆ ಬೇರೆ ದೇಶಗಳಲ್ಲಿ ಕೊರೊನಾ ಪ್ರಕರಣಗಳಿದ್ದರೂ ಈ ವಿಚಾರ ಆಚೆ ಬಂದಿರಲಿಲ್ಲ. ನಾವು ಇದನ್ನು ಬೆಳಕಿಗೆ ತಂದಿದ್ದೇವೆ ಅಷ್ಟೆ ಎಂದು ಹೇಳಿದೆ. ಇನ್ನು ಚೀನಾದ ಈ ಹೇಳಿಕೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.