ಕೊರೊನಾ ಲಸಿಕೆ ತಯಾರಿಸಿ ಅದ್ರ ಪರೀಕ್ಷೆ ನಡೆಸಲಾಗ್ತಿದೆ. ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ಆರೋಪಗಳೂ ಕೇಳಿ ಬರ್ತಿವೆ. ಲಸಿಕೆ ಅಡ್ಡ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಕೊರೊನಾ ಬರದಿರಲಿ ಎನ್ನುವ ಕಾರಣಕ್ಕೆ ಲಸಿಕೆ ಹಾಕಿಸಿಕೊಳ್ಳಬೇಕು. ಆದ್ರೆ ಲಸಿಕೆ ಹಾಕಿಸಿಕೊಂಡ ನಂತ್ರವೂ ಕೊರೊನಾ ಕಾಡಿದ್ರೆ?
ಬ್ರಿಟನ್ ನರ್ಸ್ ಗೆ ಲಸಿಕೆ ಹಾಕಿಸಿಕೊಂಡ ಒಂದು ವಾರದ ನಂತ್ರ ಕೊರೊನಾ ಕಾಣಿಸಿಕೊಂಡಿದೆ. ಫಿಜರ್ ಕೊರೊನಾದಿಂದ ರಕ್ಷಣೆ ನೀಡುವಲ್ಲಿ ಶೇಕಡಾ 95ರಷ್ಟು ಯಶಸ್ವಿಯಾಗಿದೆ ಎಂದು ಫಿಜರ್ ಕಂಪನಿ ಹೇಳ್ತಿದೆ. ಲಸಿಕೆ ಹಾಕಿಸಿಕೊಂಡ ತಕ್ಷಣ ಸುರಕ್ಷಿತರಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಒಂದು ವಾರಗಳ ಸಮಯಬೇಕು. ಈ ಸಂದರ್ಭದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡಿದ್ದೇವೆಂಬ ಕಾರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ ಮರೆಯಬಾರದು ಎಂದು ಕಂಪನಿ ಹೇಳಿದೆ.
ಅಮೆರಿಕಾದಲ್ಲಿಯೂ ಫಿಜರ್ ಲಸಿಕೆ ಪಡೆದ ನರ್ಸ್ ಗೆ 6 ದಿನಗಳ ನಂತ್ರ ಕೊರೊನಾ ಕಾಣಿಸಿಕೊಂಡಿತ್ತು. ಮೊದಲ ಡೋಸ್ ಪಡೆದ ತಕ್ಷಣ ಕೊರೊನಾದಿಂದ ಸುರಕ್ಷಿತರು ಎನ್ನಲು ಸಾಧ್ಯವಿಲ್ಲ. ಎರಡನೇ ಡೋಸ್ ನೀಡಿದ ನಂತ್ರ ಸುರಕ್ಷತೆ ಬಗ್ಗೆ ಭರವಸೆ ನೀಡಬಹುದು ಎಂದು ಫಿಜರ್ ಹೇಳಿದೆ.