ರಷ್ಯಾದ ಲಸಿಕೆ ಹೊರತುಪಡಿಸಿ ಉಳಿದ ದೇಶಗಳ ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ವಿಶ್ವದಾದ್ಯಂತ 154 ಲಸಿಕೆಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಇವುಗಳಲ್ಲಿ 44 ಲಸಿಕೆಗಳು ಮಾನವ ಪ್ರಯೋಗದ ಹಂತ ತಲುಪಿದೆ. ಅದ್ರಲ್ಲೂ ಕೆಲವು ಲಸಿಕೆ ಪ್ರಯೋಗ ಮುಂದಿದೆ.
ಲಸಿಕೆ ಪ್ರಯೋಗ ಸ್ಪರ್ಧೆಯಲ್ಲಿ ಚೀನಾದ ಮೂರು ಕಂಪನಿಗಳು ಪ್ರಸ್ತುತ ಮುಂಚೂಣಿಯಲ್ಲಿವೆ. ಲಸಿಕೆ ಪ್ರಯೋಗದ ಮೂರನೇ ಹಂತದಲ್ಲಿ ಸಿನೋವಾಕ್ (ಚೀನಾ), ಸಿನೋಫಾರ್ಮ್ (ವುಹಾನ್) ಮತ್ತು ಸಿನೋಫಾರ್ಮ್ (ಬೀಜಿಂಗ್) ಮೂರು ಕಂಪನಿಗಳು ಮುಂದಿವೆ. ಜುಲೈನಲ್ಲಿಯೇ ದೇಶದ ಎಲ್ಲಾ ಉದ್ಯೋಗಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆಗಳನ್ನು ನೀಡಲಾಗ್ತಿದೆ. ಈ ಕಂಪನಿಗಳ ಲಸಿಕೆಯ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ಇಲ್ಲಿಯವರೆಗೆ ಬಹಿರಂಗಗೊಂಡಿಲ್ಲ.
ಚೀನಾದ ಲಸಿಕೆಯ ಜೊತೆಗೆ, ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾ (ಯುಕೆ), ಮಾಡರ್ನಾ (ಯುಎಸ್), ಕ್ಯಾನ್ಸಿನೊ ಬಯೋಲಾಜಿಕಲ್ (ಚೀನಾ), ಜಾನ್ಸನ್ ಮತ್ತು ಜಾನ್ಸನ್ (ಯುಎಸ್) ಮತ್ತು ನೊವಾವಾಕ್ಸನ್ (ಯುಎಸ್) ಅಭಿವೃದ್ಧಿಪಡಿಸಿದ ಲಸಿಕೆ ಸಹ ಕ್ಲಿನಿಕಲ್ ಪ್ರಯೋಗದ ಮೂರನೇ ಹಂತದಲ್ಲಿದೆ.
ಕೊರೊನಾ ವೈರಸ್ ಲಸಿಕೆ ತಯಾರಿಸಿದ ವಿಶ್ವದ ಮೊದಲ ದೇಶ ರಷ್ಯಾ. ಇಲ್ಲಿಯವರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಎಲ್ಲಾ ಹಿರಿಯ ಅಧಿಕಾರಿಗಳು ಲಸಿಕೆ ಪಡೆದಿದ್ದಾರೆ.