ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ ಕೊರೊನಾ ಸೋಂಕಿತ ರೋಗಿಗಳ ಬಗ್ಗೆ ಸಂಶೋಧನೆ ಮಾಡಿದೆ, ರೋಗಿಯ ದೇಹದಲ್ಲಿ ಪ್ರತಿಕಾಯಗಳು 50 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಜೆಜೆ, ಜಿಟಿ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆಯ 801 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನ ಮಾಡಿದ್ದೇವೆ ಎಂದು ಸಂಶೋಧನೆಯ ಪ್ರಮುಖ ಲೇಖಕ ಡಾ.ನಿಶಾಂತ್ ಕುಮಾರ್ ಹೇಳಿದ್ದಾರೆ. ಇದರಲ್ಲಿ 28 ಜನರು ಕೊರೊನಾ ಪಾಸಿಟಿವ್ ಆಗಿದ್ದರು ಎಂದಿದ್ದಾರೆ.
ಜೆಜೆ ಆಸ್ಪತ್ರೆ ಸೆರೋ ಸಮೀಕ್ಷೆಯಲ್ಲಿ ಮೂರು ವಾರ ಮತ್ತು ಐದು ವಾರಗಳ ಹಿಂದೆ ಇನ್ನೂ 34 ರೋಗಿಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಮೂರು ವಾರಗಳ ಹಿಂದೆ ಬಂದಿದ್ದವರಲ್ಲಿ ಶೇಕಡಾ 90 ರಷ್ಟು ರೋಗಿಗಳು ಪ್ರತಿಕಾಯ ಹೊಂದಿದ್ದರು. ಐದು ವಾರಗಳ ಹಿಂದೆ ಬಂದಿದ್ದ ರೋಗಿಗಳಲ್ಲಿ ಶೇಕಡಾ 38.5 ರಷ್ಟು ರೋಗಿಗಳು ಪ್ರತಿಕಾಯಗಳನ್ನು ಹೊಂದಿದ್ದರು.
ಪ್ರತಿಕಾಯದ ಬಗ್ಗೆ ಚರ್ಚೆ ಅಗತ್ಯವಾಗಿದೆ. ಇದು ಇದ್ದಲ್ಲಿ ರೋಗಿ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗುವುದಿಲ್ಲ ಎನ್ನಲಾಗಿದೆ. ಆದ್ರೆ ಹಾಂಗ್ ಕಾಂಗ್ ನಲ್ಲಿ ಕೊರೊನಾದಿಂದ ಚೇತರಿಸಿಕೊಂಡ ನಂತ್ರ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಅಂದ್ರೆ ಪ್ರತಿಕಾಯ ದೇಹದಲ್ಲಿ 50 ದಿನಗಳ ಕಾಲ ಮಾತ್ರ ಇರುವುದ್ರಿಂದ ಕೊರೊನಾ ಮತ್ತೆ ಕಾಡುತ್ತದೆ ಎಂದು ಸಂಶೋಧನೆ ಹೇಳಿದೆ.