ಕೊರೊನಾ ವೈರಸ್ ಗೆ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿ ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಸುಂದರ ಇಟಲಿಯಲ್ಲಿ ಕೊರೊನಾ ಮುಕ್ತ ಹಳ್ಳಿಯೂ ಇದೆ.
ಯಸ್. ಸಿಂಕುಫೊಂಡಿ ಮತ್ತು ಕಲಾಬ್ರಿಯಾ ಕೊರೊನಾ ಮುಕ್ತ ಹಳ್ಳಿಯಾಗಿದೆ. ಇಟಲಿಯಲ್ಲಿ ಕೊರೊನಾ ಹಿನ್ನಲೆಯಲ್ಲಿ ಅತಿ ಕಡಿಮೆ ಬೆಲೆಗೆ ಮನೆಗಳನ್ನು ಮಾರಾಟ ಮಾಡಲಾಗ್ತಿದೆ. ಆದ್ರೆ ಈ ಎರಡು ಹಳ್ಳಿಯಲ್ಲಿ ಜನಸಂಖ್ಯೆ ಹೆಚ್ಚಿಸಲು ಕಡಿಮೆ ಬೆಲೆಗೆ ಮನೆ ಮಾರಾಟ ಮಾಡಲಾಗ್ತಿದೆ ಎಂದು ಮೇಯರ್ ಹೇಳಿದ್ದಾರೆ.
ಸಿಂಕುಫೊಂಡಿ ಸಮುದ್ರಿಂದ 15 ನಿಮಿಷ ದೂರದಲ್ಲಿದೆ. ಆರಂಭದಲ್ಲಿ ಮನೆ ಖರೀದಿಗೆ 1 ಡಾಲರ್ ಅಂದ್ರೆ 74.77 ರೂಪಾಯಿ ನೀಡಬೇಕು. ನಂತ್ರ 280 ರೂಪಾಯಿ ವಾರ್ಷಿಕ ವಿಮಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ಖರೀದಿದಾರರು ಮೂರು ವರ್ಷಗಳಲ್ಲಿ ಖರೀದಿಸಿದ ಮನೆಯ ದುರಸ್ತಿ ಮತ್ತು ನವೀಕರಣ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ಅವರು ಸುಮಾರು, 22,000 ಡಾಲರ್ ದಂಡವನ್ನು ಪಾವತಿಸಬೇಕಾಗುತ್ತದೆ.