ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ದೈಹಿಕ ಸಂಬಂಧ ಬೆಳೆಸುವುದ್ರಿಂದಲೂ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಸಲಹೆ ನೀಡಿದ್ದಾರೆ.
ಒಂದು ಹಂತದಲ್ಲಿ ಲೈಂಗಿಕ ಸಂಪರ್ಕದಿಂದಲೂ ಕೊರೊನಾ ಹರಡುತ್ತದೆ. ಹಾಗಾಗಿ ಶಾರೀರಿಕ ಸಂಬಂಧ ಬೆಳೆಸುವ ಮೊದಲು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಂಭೋಗದ ನಂತ್ರ ಸ್ನಾನವನ್ನು ಅವಶ್ಯಕವಾಗಿ ಮಾಡಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ. ಮನೆಯಿಂದ ಹೊರಗಿರುವ ವ್ಯಕ್ತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು ರಿಸ್ಕ್ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೊರೊನಾ ಕಾರಣಕ್ಕೆ ಸಂಗಾತಿಗಳಿಗೆ ದೂರವಿರುವಂತೆ ಸಲಹೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಸಂಗಾತಿಗಳು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆ ಕೊರೊನಾ ಸೋಂಕಿನಿಂದ ಹೊರ ಬಂದಿರುವವರ ಜೊತೆ 30 ದಿನಗಳ ಕಾಲ ಶಾರೀರಿಕ ಸಂಬಂಧ ಬೆಳೆಸಬಾರದು.