ಕೊರೊನಾ ಮಹಾಮಾರಿಯ ಕಾಟ ಇನ್ನೂ ತಪ್ಪಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ವೈರಸ್‌ನ ಪ್ರಾರಂಭವಾಗಿದೆ. ಈ ವೈರಸ್ ತಗಲುವ ಭೀತಿ ಎದುರಾಗಿದೆ. ಏಕೆಂದರೆ, ದಕ್ಷಿಣ ಕೊರಿಯಾದಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ಹೆಚ್ಚಾಗಿವೆ.
ಹೌದು, ದಕ್ಷಿಣ ಕೊರಿಯಾದಲ್ಲಿ ಇಂತಹದೊಂದು ವೈರಸ್ ಕಾಡುತ್ತಿದೆ. ಈ ವೈರಸ್‌ಗೆ ಅಲ್ಲಿನ ಗ್ಯಾಂಗ್‌ವಾನ್ ಪ್ರಾಂತ್ಯದಲ್ಲಿರುವ ಜಮೀನೊಂದರಲ್ಲಿ ಮೂರು ಹಂದಿಗಳು ಬಲಿಯಾಗಿವೆ. ಇನ್ನು ಈ ಮೂರು ಹಂದಿಗಳು ಬಲಿಯಾದ ಬೆನ್ನಲ್ಲೇ ಅಲ್ಲಿನ ಅಧಿಕಾರಿಗಳು ಸುಮಾರು 1500 ಹಂದಿಗಳನ್ನು ಕೊಂದಿದ್ದಾರೆ ಎನ್ನಲಾಗಿದೆ.
ಈ ವೈರಸ್ ಹಂದಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ತೀರಾ ಕಡಿಮೆ ಇದ್ದರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೆಯೇ ಈ ವೈರಸ್ ಹಂದಿಗಳಿಂದ ಹಂದಿಗಳಿಗೆ ವೇಗವಾಗಿ ಹರಡಬಹುದು ಎಂತಲೂ ಅಂದಾಜಿಸಲಾಗಿದೆ.