ನವದೆಹಲಿ: ಕೊರೊನಾ ಸೋಂಕು ರೂಪಾಂತರಗೊಂಡು ಹರಡುತ್ತಿರುವ ಬೆನ್ನಲ್ಲೇ ಇದೀಗ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ದೊರತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾ ಬಗ್ಗೆ ಆತಂಕಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.
ನಾಲ್ಕು ಬಗೆಯ ಕೊರೊನಾ ವೈರಸ್ ವಿಶ್ವಾದ್ಯಂತ ರೂಪಾಂತರಗೊಂಡು ಹರಡುತ್ತಿದೆ ಎಂದು ತಿಳಿಸಿದೆ. ಚೀನಾದ ವುಹಾನ್ ನಲ್ಲಿ ಆರಂಭವಾದ ಕೊರೊನಾ ಸೋಂಕು ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದೀಗ ಅದು ರೂಪಾಂತರಗೊಂಡು ಹರಡಲು ಆರಂಭಿಸಿದೆ.
ಸಾರ್ಸ್-ಕೋವಿ-2 ನಿಂದ ಉಂಟಾಗುವ ವಿಚಿತ್ರ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಲವು ವರದಿ ಬಿಡುಗಡೆ ಮಾಡಿದ್ದು, ಸಾರ್ಸ್-ಕೋವಿ-2 ಜಾಗದಲ್ಲಿ D614G ಮ್ಯುಟೆಂಟ್ ಆವರಿಸಿದೆ. ಆದರೆ ರೂಪಾಂತರ ಕೊರೊನಾ ವೇಗವಾಗಿ ಹರಡಲಿದೆ ಹೊರತು ತೀವ್ರವಾದ ಕಾಯಿಲೆಯಾಗಿ ಪರಿಣಮಿಸುವುದಿಲ್ಲ ಎಂದು ತಿಳಿಸಿದೆ.