ಕೊರೊನಾ ಮಹಾಮಾರಿಯ ಆರ್ಭಟ ವಿಶ್ವದಲ್ಲಿ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಇದರ ಮಧ್ಯೆ WHO ಮಹತ್ವದ ವಿಚಾರವೊಂದನ್ನು ಹೊರ ಹಾಕಿದೆ.
ಹೌದು, ಜಾಗತೀಕವಾಗಿ ಪ್ರತಿ 10 ಜನರ ಪೈಕಿ ಒಬ್ಬರಿಗೆ ಸೋಂಕು ಧೃಡವಾಗುತ್ತಿದೆ. ಈ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ ಎಂದು ವಿಶ್ವಸಂಸ್ಥೆಯ ತುರ್ತು ಪರಿಸ್ಥಿತಿಗಳ ಮುಖ್ಯಸ್ಥ ಡಾ.ಮೈಕೆಲ್ ರಯಾನ್ ತಿಳಿಸಿದ್ದಾರೆ. ಮತ್ತೊಂದು ಆಘಾತಕಾರಿ ವಿಚಾರ ಎಂದರೆ, ಹೀಗಿರುವ ಸೋಂಕಿತರಿಗಿಂತ 20 ರಷ್ಟು ಜನ ಈಗಾಗಲೇ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಈಗಾಗಲೇ 76 ಕೋಟಿ ಜನರು ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಳಿತ ಆಗುತ್ತಲೇ ಇದೆ. ಸಾವಿನ ಪ್ರಮಾಣವನ್ನು ನಿಯಂತ್ರಿಸಲಾಗುತ್ತಿದ್ದು, ಸೋಂಕನ್ನು ನಿಯಂತ್ರಣ ಮಾಡೋದಿಕ್ಕೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.