ಕೊರೊನಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಆದ್ರೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಇದಕ್ಕೆ ಕಾರಣವೇನು ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ವಿಜ್ಞಾನಿಗಳ ಪ್ರಕಾರ, ವಿಟಮಿನ್ ಡಿ ಕೊರೊನಾದಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡ್ತಿದೆ. ಐರಿಶ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ವರದಿಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಡಿ ಹೊಂದಿರುವ ದೇಶಗಳಲ್ಲಿ ಸೋಂಕಿತರ ಪ್ರಮಾಣವು ಕಡಿಮೆಯಿದೆ. ಅಲ್ಲಿ ಸಾವುಗಳು ಸಹ ಕಡಿಮೆ. ದೇಹದಲ್ಲಿ ವಿಟಮಿನ್-ಡಿ ಕೊರತೆಯಿರುವ ಜನರ ಮೇಲೆ ವೈರಸ್ ಹಾನಿಯನ್ನುಂಟುಮಾಡಿದೆ. ನಾರ್ವೆ, ಡೆನ್ಮಾರ್ಕ್, ಫಿನ್ಲ್ಯಾಂಡ್, ಸ್ವೀಡನ್ ದೇಶಗಳ ಜನರಿಗೆ ವಿಟಮಿನ್-ಡಿ ರಕ್ಷಣಾ ಕವಚವಾಗಿದೆ.
ಈ ವರದಿಯಲ್ಲಿ, ಯುರೋಪಿಯನ್ ರಾಷ್ಟ್ರಗಳಾದ ಸ್ಪೇನ್, ಫ್ರಾನ್ಸ್, ಇಟಲಿ ಮತ್ತು ಬ್ರಿಟನ್ ಜೊತೆ ಅಮೆರಿಕ, ಭಾರತ ಮತ್ತು ಚೀನಾ ಜನರಲ್ಲಿ ಸಹ ವಿಟಮಿನ್-ಡಿ ಕೊರತೆ ಕಾಣಿಸಿದೆ. ಹಾಗಾಗಿ ಕೊರೊನಾದ ವಿರುದ್ಧ ಹೋರಾಡುವ ಸಾಮರ್ಥ್ಯ ಇಲ್ಲಿ ಬಹಳ ಕಡಿಮೆ. ಈ ಕಾರಣದಿಂದಾಗಿ ಲಕ್ಷಾಂತರ ಪ್ರಕರಣಗಳು ಇಲ್ಲಿ ಬರುತ್ತಿವೆ ಎನ್ನಲಾಗಿದೆ.
ಭಾರತ ಮತ್ತು ಚೀನಾದಲ್ಲಿ ವರ್ಷದ ಆರಂಭದ ತಿಂಗಳುಗಳಲ್ಲಿ ಶೀತವಿತ್ತು. ಸೋಂಕನ್ನು ತಡೆಗಟ್ಟಲು ಲಾಕ್‌ಡೌನ್ ವಿಧಿಸಲಾಯ್ತು. ಜನರು ತಮ್ಮ ಮನೆಗಳಲ್ಲಿ ಉಳಿದ ಕಾರಣ 20 ನಿಮಿಷ ಕೂಡ ಸೂರ್ಯನ ಕಿರಣ ಅವ್ರ ದೇಹ ಸೇರಲಿಲ್ಲ. ಇದು ಗಂಭೀರ ಸ್ವರೂಪ ಪಡೆಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.