ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾ ರೋಗ ಲಕ್ಷಣಗಳಲ್ಲಿ ಬದಲಾವಣೆ ಕಂಡು ಬರ್ತಿದೆ. ಅಧಿಕ ಜ್ವರ, ಒಣ ಕೆಮ್ಮು, ಗಂಟಲಿನಲ್ಲಿ ಉರಿ, ದಣಿವು ಮತ್ತು ಉಸಿರಾಟದ ತೊಂದರೆ ಕೊರೊನಾ ವೈರಸ್‌ನ ಪ್ರಮುಖ ಲಕ್ಷಣಗಳಾಗಿವೆ. ಇದಲ್ಲದೆ ವಾಸನೆ ಬರದಿರುವುದು, ಬಾಯಿ ರುಚಿ ಇಲ್ಲದಿರುವುದು ಕೂಡ ಕೊರೊನಾ ಲಕ್ಷಣವಾಗಿದೆ. ಹಾಗೆ ಆಸ್ಪತ್ರೆಗೆ ದಾಖಲಾದ ಕೆಲವು ರೋಗಿಗಳ ಮಾನಸಿಕ ಸ್ಥಿತಿ ಮೇಲೆ ಇದು ಪರಿಣಾಮ ಬೀರಿದೆ ಎಂಬ ವಿಷ್ಯ ಹೊರ ಬಿದ್ದಿದೆ.
ಕೊರೊನಾ ವೈರಸ್ ರೋಗಿಗಳಲ್ಲಿ ಸ್ಟ್ರೋಕ್, ಮೆದುಳಿನ ರಕ್ತಸ್ರಾವ ಮತ್ತು ಮೆಮೊರಿ ನಷ್ಟದಂತಹ ಅನೇಕ ಅಪಾಯಕಾರಿ ಪರಿಣಾಮಗಳು ಈಗ ಕಂಡುಬರುತ್ತಿವೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಎಂಡಿ ರಾಬರ್ಟ್ ಸ್ಟೀವನ್ಸ್ ಪ್ರಕಾರ, ಕೋವಿಡ್ -19 ಘಟಕದಲ್ಲಿನ ಅರ್ಧದಷ್ಟು ರೋಗಿಗಳಲ್ಲಿ ನರವೈಜ್ಞಾನಿಕ ಲಕ್ಷಣಗಳನ್ನು ನೋಡಿದ್ದಾರಂತೆ. ವೈರಸ್ ಮೆದುಳಿನ ಮೇಲೆ ಏಕೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.
ವೈರಸ್‌ನ ಆನುವಂಶಿಕ ಕಣಗಳು ಬೆನ್ನುಮೂಳೆಯ ದ್ರವದಲ್ಲಿ ಕಂಡುಬಂದಿದೆ ಫ್ಲೋರಿಡಾದಲ್ಲಿಯೂ ಒಂದು ಪ್ರಕರಣ ಕಂಡುಬಂದಿದೆ, ಅಲ್ಲಿ ಮೆದುಳಿನ ಕೋಶಗಳಲ್ಲಿ ವೈರಲ್ ಕಣಗಳು ಕಂಡುಬಂದಿವೆ. ರಕ್ತದ ಹರಿವು ಮತ್ತು ನರಗಳೊಳಗೆ ವೈರಸ್‌ನ ಪ್ರವೇಶದಿಂದ ಮಾತ್ರ ಇದು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.